(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ತಂಬಾಕು ಮುಕ್ತ ದಿನ ಆಚರಿಸಲಾಯಿತು. ಈ ವಿಶೇಷ ದಿನದ ಸಂದರ್ಭದಲ್ಲಿ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದಿಂದ ನಿರ್ದೇಶಿಸಲ್ಪಟ್ಟ ಪ್ರತಿಜ್ಞೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಮೀನುಗಾರಿಕಾ ಕಾಲೇಜಿನ ಡೀನ್ ಡಾ ಸೆಂಥಿಲ್ ವೆಲ್ ಎ. ಅವರು ಕೇಂದ್ರದ ಮತ್ತು ಮೀನುಗಾರಿಕಾ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ. ಟಿ. ರಾಮಚಂದ್ರ ನಾಯ್ಕ ರವರು ತಂಬಾಕು ಮುಕ್ತ ದಿನದ ಪ್ರಾಮುಖ್ಯತೆ ತಿಳಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟ ಎಂಟು ಅಧಿಕೃತ ಜಾಗತಿಕ ಸಾರ್ವಜನಿಕ ಆರೋಗ್ಯ ಪ್ರಚಾರಗಳಲ್ಲಿ ಒಂದಾದ ತಂಬಾಕು ಮುಕ್ತ ದಿನವನ್ನು ಮೇ 31 ರಂದು ಆಚರಿಸಲಾಗುತ್ತದೆ. ಇದು ಪ್ರಪಂಚದಾದ್ಯಂತದ ಎಲ್ಲಾ ವಿಧದ ತಂಬಾಕು ಸೇವನೆಯಿಂದ 24 ಗಂಟೆಗಳ ಮುಕ್ತವಾಗಿರಲು ಉದ್ದೇಶಿತವಾಗಿದೆ. ತಂಬಾಕು ಸೇವನೆಯ ವ್ಯಾಪಕ ಹರಡಿಕೆಯನ್ನು ಮತ್ತು ಋಣಾತ್ಮಕ ಆರೋಗ್ಯದ ಪರಿಣಾಮಗಳನ್ನು ಗಮನ ಸೆಳೆಯಲು ಈ ದಿನವನ್ನು ಆಚರಿಸಲಾಗುತಿದೆ.
ತಂಬಾಕು ಸೇವನೆಯಿಂದ ಪ್ರತಿ ವರ್ಷ 7 ದಶಲಕ್ಷಕ್ಕೂ ಹೆಚ್ಚಿನ ಜನರ ಸಾವು ನೋವುಗಳಿಗೆ ಕಾರಣವಾಗುತ್ತಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ ಪ್ರತಿವರ್ಷ ಜಗತ್ತಿನಾದ್ಯಂತ 8 ಲಕ್ಷಕ್ಕೂ ಹೆಚ್ಚು ಪರೋಕ್ಷ ಧೂಮಪಾನಿಗಳು ಸಾವನ್ನಪ್ಪುತ್ತಿದ್ದಾರೆ. ಕಳೆದ 21 ವರ್ಷಗಳಲ್ಲಿ ತಂಬಾಕು ಮುಕ್ತ ದಿನವನ್ನು ಸರ್ಕಾರಗಳು, ಸಾರ್ವಜನಿಕ ಆರೋಗ್ಯ ಸಂಘಟನೆಗಳು, ಧೂಮಪಾನಿಗಳು ಮತ್ತು ತಂಬಾಕು ಉದ್ಯಮದಿಂದ ಜಗತ್ತಿನಾದ್ಯಂತ ಬೆಂಬಲವನ್ನು ವ್ಯಕ್ತಪೀಡಿಸುತಿದ್ದಾರೆಂದು ಈ ಸಂದರ್ಭದಲ್ಲಿ ತಿಳಿಸಿದರು. ಮೀನುಗಾರಿಕಾ ಕಾಲೇಜಿನ ಮತ್ಸ್ಯ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ ಎಸ್. ಎಂ. ಶಿವಪ್ರಕಾಶ ಮತ್ತು ಜಲಜೀವಿ ಅರೋಗ್ಯ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ ಕೆ.ಎಸ್. ರಮೇಶ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.