ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ➤ ಆಕ್ಷೇಪಣೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ನಡ್ಸಾಲು ಗ್ರಾಮದ ಹೊಸದಾಗಿ ನಿರ್ಮಿತವಾಗಿರುವ ಸಾಚಿ ರಾಯಲ್ ಅಪಾರ್ಟ್‍ಮೆಂಟ್‍ಗೆ ಕೇಂದ್ರ ಸ್ಥಿರಾಸ್ತಿ ಮಾರುಕಟ್ಟೆ ದರ ನಿರ್ಧರಣಾ ಸಮಿತಿಯು(c.v.c) ರೂ 22000 ದರ ನಿಗದಿ ಪಡಿಸಲು ತಾತ್ವಿಕ ಅನುಮೋದನೆ ನೀಡಿದೆ.

ಇದಕ್ಕೆ  c.v.c  ನಿಯಮಾವಳಿ 2003 ರ ಅನ್ವಯ ಸಾರ್ವಜನಿಕರ ಆಕ್ಷೇಪಣೆಗಳ ಪರಿಶೀಲನೆಗಾಗಿ ತಾಲೂಕು ಕಚೇರಿ ಮಂಗಳೂರು, ಮಹಾನಗರಪಾಲಿಕೆ ಸುರತ್ಕಲ್, ವಿಶೇಷ ತಹಶೀಲ್ದಾರರ ಕಚೇರಿ ಮುಲ್ಕಿ, ಉಪನೋಂದಣಿ ಕಚೇರಿ ಮುಲ್ಕಿ, ಕಂದಾಯ ನೀರೀಕ್ಷಕರ ಕಚೇರಿ ಕಾಪು ಇಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಜೂನ್ 13 ರಂದು ಪ್ರಕಟಿಸಲಾಗಿದೆ.ಸಾರ್ವಜನಿಕರಿಂದ ಈ ಬಗ್ಗೆ ಅಭಿಪ್ರಾಯ ಆಕ್ಷೇಪಣೆಗಳಿದ್ದಲ್ಲಿ ಪತ್ರಿಕಾ ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ಒಳಗೆ ಲಿಖಿತ ರೂಪದಲ್ಲಿ ಅಧ್ಯಕ್ಷರು ಹಾಗೂ ತಹಶೀಲ್ದಾರರು ಮಂಗಳೂರು ಇವರಿಗೆ ಅಥವಾ ಕಾರ್ಯದರ್ಶಿ/ ಉಪನೋಂದಣಾಧಿಕಾರಿ ಮುಲ್ಕಿ ಇವರಿಗೆ ಸಲ್ಲಿಸಬೇಕು. ಎಂದು ಕಾರ್ಯದರ್ಶಿ/ ಉಪನೋಂದಣಾಧಿಕಾರಿ ಸ್ಥಿರಸೊತ್ತು ಮೌಲ್ಯಮಾಪನಾ ಉಪಸಮಿತಿ ಮಂಗಳೂರು ತಾಲೂಕು/ ಮುಲ್ಕಿ ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group