ವೃತ್ತಿರಂಗಭೂಮಿಗಾಗಿ ಶಿಷ್ಯವೇತನ ➤ ಮೌಖಿಕ ಸಂದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ವೃತ್ತಿರಂಗಭೂಮಿಯಲ್ಲಿ ತರಬೇತಿ ಪಡೆದು, ಅದೇ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿರುವ ಯುವಕ/ಯುವತಿಯರಿಂದ ಶಿಷ್ಯವೇತನಕ್ಕಾಗಿ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಶಿಷ್ಯವೇತನವನ್ನು 6 ತಿಂಗಳಿಗೆ ನೀಡಲಾಗುತ್ತದೆ. ಜುಲೈ 11 ರಂದು ಬೆಳಿಗ್ಗೆ 10.30 ರಿಂದ ಧಾರವಾಡದ ರಂಗಾಯಣದ ಆವರಣದಲ್ಲಿ ಮೌಖಿಕ ಸಂದರ್ಶನ ಏರ್ಪಡಿಸಿದೆ.


ಆಸಕ್ತ ಯುವಕ ಯುವತಿಯರು ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. ಒಟ್ಟು 15 ಜನ ಯುವಕ/ಯುವತಿಯರಿಗೆ ರೂ. 10,000/-ಗಳನ್ನು 6 ತಿಂಗಳುಗಳ ಕಾಲ ಶಿಷ್ಯವೇತನವಾಗಿ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು 6 ತಿಂಗಳುಗಳ ಕಾಲ ಅಕಾಡೆಮಿ ಸೂಚಿಸುವ ವೃತ್ತಿನಾಟಕ ಕಂಪೆನಿಯಲ್ಲಿ ಸ್ವಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಊಟ, ವಸತಿಯನ್ನು ಆಯಾ ವೃತ್ತಿನಾಟಕ ಸಂಸ್ಥೆ ಒದಗಿಸುತ್ತದೆ.18 ರಿಂದ 35 ವರ್ಷಗಳ ವಯೋಮಿತಿಯವರಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಆಸಕ್ತರಿಗೆ ಮತ್ತು ರಂಗಭೂಮಿಯಲ್ಲಿ ಅನುಭವವಿರುವವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ನೇರವಾಗಿ ಮೌಖಿಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಸಂದರ್ಶನದಲ್ಲಿ ಭಾಗವಹಿಸಬೇಕು.

Also Read  ವಲಸೆ ಕುರಿಗಾರರಿಂದ ಅರ್ಜಿ ಆಹ್ವಾನ

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು (ಕನಿಷ್ಠ 7ನೇ ತರಗತಿ ಓದಿರಬೇಕು), ಆಧಾರ್ ಕಾರ್ಡ್, ರಂಗಭೂಮಿಯ ಅನುಭವದ ಬಗ್ಗೆ ಪ್ರಮಾಣ ಪತ್ರಗಳು (ಇದ್ದರೆ ಮಾತ್ರ), ಇಲ್ಲದಿದ್ದಲ್ಲಿ ಸ್ವಪೋಷಿತ ಪ್ರಮಾಣ ಪತ್ರ,. ಪಾಸ್ ಪೋರ್ಟ್ ಸೈಜಿನ 3 ಭಾವಚಿತ್ರಗಳು ಈ ದಾಖಲೆಗಳೊಂದಿಗೆ, ರಂಗಭೂಮಿ ಅನುಭವನದ ಕುರಿತು ಸ್ವಯಂ ಅರ್ಜಿಯನ್ನು ಸಲ್ಲಿಸಿ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ನಿರಳವಾಗಿ ಮಾತನಾಡುವ ಕೌಶಲ್ಯ ಹೊಂದಿರಬೇಕು.ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 080-22237484 ನ್ನು ಸಂಪರ್ಕಿಸಬಹುದಾಗಿದೆ, ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್.ಜಿ. ಇವರ ಪ್ರಕಟಣೆ ತಿಳಿಸಿದೆ.

Also Read  ತೈಲ ಸೋರಿಕೆ ನಿರ್ವಹಣೆ ➤ನಿರಂತರ ಎಚ್ಚರ ವಹಿಸಲು ಡಿಸಿ ಸೂಚನೆ

error: Content is protected !!
Scroll to Top