ಮಂಗಳೂರು ಮಹಾನಗರ ಪಾಲಿಕೆ ➤ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಲ್ಲಿ 24.10% ಪ.ಜಾ/ಪಂ ಕಲ್ಯಾಣ ಕಾರ್ಯಕ್ರಮ, 7.25% ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮ ಮತ್ತು 5% ವಿಕಲ ಚೇತನರ ಕಲ್ಯಾಣ ಕಾರ್ಯಕ್ರಮದಡಿ 2019-20 ನೇ ಸಾಲಿನಲ್ಲಿ ವ್ಯಕ್ತಿ ಸಂಬಂಧಿಸಿದ ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸವಲತ್ತುಗಳನ್ನು ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ 2.50.ಲಕ್ಷ ಮೀರಿರಬಾರದು, ಇತರೆ ಸಾಮಾನ್ಯ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ 3.00 ಲಕ್ಷಗಳನ್ನು ಮೀರಿರಬಾರದು.24.10% ನಿಧಿಯ ಪ.ಜಾತಿ ಮತ್ತು ಪ.ಪಂ ಕಲ್ಯಾಣ ಕಾರ್ಯಕ್ರಮಗಳ ವಿವರ ಇಂತಿವೆ: ಪಕ್ಕಾ ಮನೆ ನಿರ್ಮಾಣ ಸಹಾಯ ಧನ, ಮನೆ ದುರಸ್ಥಿಗೆ ಸಹಾಯ ಧನ, ಸಣ್ಣ ಉದ್ದಿಮೆಗೆ ಸಹಾಯ ಧನ, ಶಸ್ತ್ರ ಚಿಕಿತ್ಸೆಗೆ ಸಹಾಯ ಧನ, ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ, ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ (ಎಸ್.ಎಸ್.ಎಲ್.ಸಿ ಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ).

ಎಂ.ಬಿ.ಬಿ.ಎಸ್/ಬಿ.ಇ ವ್ಯಾಸಂಗಕ್ಕಾಗಿ ಮಾತ್ರ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ 50% ರಷ್ಟು ಪ್ರವೇಶ ಶುಲ್ಕ ಪಾವತಿ, GRE/GMT/TOEFL/CAT ಮೊದಲಾದ ಸ್ವರ್ಧಾತ್ಮಕ ಪರೀಕ್ಷೆಯ ಶುಲ್ಕ ಪಾವತಿ, ಪಿ.ಎಚ್.ಡಿ/ ಎಂ.ಪಿಲ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧ/ ಸಮಾವೇಶ/ ಕಾರ್ಯಾಗಾರದಲ್ಲಿ ಭಾಗವಹಿಸಲು ವಾಸ್ತವಿಕ ವೆಚ್ಚ ಪಾವತಿ, ಕೆ.ಪಿ.ಎಸ್.ಸಿ ಪರೀಕ್ಷೆಗಳಿಗೆ ಬೇಕಾದ ಶಿಕ್ಷಣ ನೀಡುವ ಅಧಿಕೃತ ವಿದ್ಯಾ ಸಂಸ್ಥೆಗಳಿಗೆ ಪ್ರವೇಶ ಶುಲ್ಕ ಪಾವತಿ, ಎಂ.ಬಿ.ಬಿ.ಎಸ್/ಬಿ.ಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಡೆಸ್ಕ್ ಟಾಪ್ ಕಂಪ್ಯೂಟರ್/ಲ್ಯಾಪ್ ಟಾಪ್ ಖರೀದಿಗೆ ಸಹಾಯ ಧನ.

Also Read  ಕರ್ನಾಟಕ ಕಲ್ಯಾಣ ಉತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಿಎಂ

ಸರಕಾರದ ವಿವಿಧ ಇಲಾಖೆಗಳಿಂದ ಆಯೋಜಿಸಲ್ಪಡುವ ತಾಲ್ಲೂಕು/ ಜಿಲ್ಲಾ/ ರಾಜ್ಯ/ ರಾಷ್ಟ್ರೀಯ/ ಅಂತರಾಷ್ಟ್ರೀಯ ಮಟ್ಟದ ಕ್ರೀಡೆ/ ಕಲೆ/ ಸಾಂಸ್ಕೃತಿಕ ಚಟುವಟಿಕೆಗಳ ಸ್ವರ್ಧೆಗಳಲ್ಲಿ ಭಾಗವಹಿಸಿದ್ದಲ್ಲಿ/ ಜಯಗಳಿಸಿದ್ದಲ್ಲಿ ಪ್ರೋತ್ಸಾಹ ಧನ, ಯು.ಜಿ.ಡಿ ಸಂಪರ್ಕ ಹಾಗೂ ನಳ್ಳಿ ನೀರಿನ ಸಂಪರ್ಕಕ್ಕೆ ಸಹಾಯ ಧನ, ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯ ಧನ,7.25% ಬಡಜನರ ಕಲ್ಯಾಣ ಕಾರ್ಯಕ್ರಮಗಳ ವಿವರ ಇಂತಿವೆ: ಪಕ್ಕಾ ಮನೆ ನಿರ್ಮಾಣ ಸಹಾಯ ಧನ, ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ, ನಳ್ಳಿ ನೀರಿನ ಸಂಪರ್ಕಕ್ಕೆ ಸಹಾಯ ಧನ, ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯ ಧನ, ಶಸ್ತ್ರ ಚಿಕಿತ್ಸೆಗೆ ಸಹಾಯ ಧನ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಯಿಂದ ಹಾನಿಗೊಳಗಾದ ಮನೆಗಳ ದುರಸ್ಥಿಗೆ ಸಹಾಯ ಧನ.

5% ವಿಕಲ ಚೇತನ ಕಲ್ಯಾಣ ಕಾರ್ಯಕ್ರಮಗಳ ವಿವರ ಇಂತಿವೆ: ಪಕ್ಕಾ ಮನೆ ನಿರ್ಮಾಣ ಸಹಾಯ ಧನ, ಸಣ್ಣ ಉದ್ದಿಮೆಗೆ ಸಹಾಯ ಧನ, ಶಸ್ತ್ರ ಚಿಕಿತ್ಸೆಗೆ ಸಹಾಯ ಧನ, ಶೌಚಾಲಯ ನಿರ್ಮಾಣ ಸಹಾಯ ಧನ, ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ (ಎಸ್.ಎಸ್.ಎಲ್.ಸಿ ಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ), ಸರಕಾರದ ವಿವಿಧ ಇಲಾಖೆಗಳಿಂದ ಆಯೋಜಿಸಲ್ಪಡುವ ತಾಲ್ಲೂಕು/ ಜಿಲ್ಲಾ/ ರಾಜ್ಯ/ ರಾಷ್ಟ್ರೀಯ/ ಅಂತರಾಷ್ಟ್ರೀಯ ಮಟ್ಟದ ಕ್ರೀಡೆ/ ಕಲೆ/ ಸಾಂಸ್ಕೃತಿಕ ಚಟುವಟಿಕೆಗಳ ಸ್ವರ್ಧೆಗಳಲಿ ಭಾಗವಹಿಸಿದ್ದಲ್ಲಿ/ ಜಯಗಳಿಸಿದ್ದಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು.ವಿದ್ಯಾಭ್ಯಾಸದ ನೆರವು ಪಡೆಯಲು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಶಿಕ್ಷಣ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬೇಕು. ನಿಗಧಿತ ನಮೂನೆಯಲ್ಲಿ ಅಗಸ್ಟ್ 30 ರೊಳಗೆ ಅರ್ಜಿ ಸಲ್ಲಿಸಬೇಕು. ಹಾಗೂ ಅರ್ಜಿ ನಮೂನೆ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶವನ್ನು ಸಂಪರ್ಕಿಸಬೇಕು ಎಂದು ಉಪಆಯುಕ್ತರು(ಆಡಳಿತ) ಮಹಾನಗರಪಾಲಿಕೆ ಇವರ ಪ್ರಕಟಣೆ ತಿಳಿಸಿದೆ.

Also Read  ಪುತ್ತೂರು ಬಿಜೆಪಿ ಅಭ್ಯರ್ಥಿ ಆಯ್ಕೆಯ ಕಗ್ಗಂಟಿಗೆ ಕೊನೆಗೂ ತೆರೆ ► ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಬಹುತೇಕ ಖಚಿತ

error: Content is protected !!
Scroll to Top