ಬಿ.ಆರ್ ಶ್ರೀನಿವಾಸ ಆಚಾರ್ ಸೇವೆ ಸ್ಮರಣೀಯ ➤ ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.29.ಜೂನ್ 28 ರಂದು ವಾರದ ಕವಾಯತಿನ ಸಂದರ್ಭದಲ್ಲಿ ಬಂಟ್ವಾಳ ಘಟಕದಿಂದ ಇತ್ತೀಚಿಗೆ ನಿವೃತ್ತರಾದ ಬಿ.ಆರ್ ಶ್ರೀನಿವಾಸ್ ಆಚಾರ್ ಅವರನ್ನು ಸನ್ಮಾನಿಸಲಾಯಿತು.

ಸುಮಾರು 37 ವರ್ಷಗಳಿಂದ ಬಂಟ್ವಾಳ ಘಟಕದ ಗೃಹರಕ್ಷಕರಾಗಿ ತನ್ನನ್ನು ತಾನು ತೊಡಗಿಸಿಕೊಂಡು ನಿಷ್ಕಾಮ ಸೇವೆ ಸಲ್ಲಿಸಿರುತ್ತಾರೆ.ದ.ಕ. ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಸನ್ಮಾನಿಸಿದ ಬಳಿಕ ಮಾತನಾಡಿ ಈ ಇಲಾಖೆಗೆ 1982 ರಲ್ಲಿ ಸೇರ್ಪಡೆಕೊಂಡು 2016 ರಿಂದ ಬಂಟ್ವಾಳ ಘಟಕದ ಪ್ರಭಾರ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಚುನಾವಣಾ ಕರ್ತವ್ಯ, ಪ್ರವಾಹ ರಕ್ಷಣಾ ಕರ್ತವ್ಯ ಮತ್ತು ಇನ್ನಿತರ ಬಂದೋಬಸ್ತು ಕರ್ತವ್ಯಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುತ್ತಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಉಪ ಸಮಾದೇಷ್ಟರಾದ ರಮೇಶ್, ಮಾಜಿ ಘಟಕಾಧಿಕಾರಿ ಕೃಷ್ಣ ನಾಯಕ್, ಪ್ರಭಾರ ಘಟಕಾಧಿಕಾರಿ ಐತ್ತಪ್ಪ, ಹಾಗೂ ಬಂಟ್ವಾಳ ಘಟಕದ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ಕರಾವಳಿಗೆ ಮೇ 4ರಂದು ಪ್ರಧಾನಿ ಮೋದಿ ಭೇಟಿ

 

error: Content is protected !!
Scroll to Top