ತೆಂಗು ಫಸಲು ಬಹಿರಂಗ ಹರಾಜು ಮೂಲಕ ವಿಲೇವಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.29.ದಕ್ಷಿಣಕನ್ನಡ ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿನ 2019-20 ನೇ ಸಾಲಿನ 01-04-2019 ರಿಂದ 31-03-2020ರ ಅವಧಿಯ ತೆಂಗು ಫಸಲನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.ಎಂದು ಪ್ರಕಟನೆ ತಿಳಿಸಿದೆ.

ಜುಲೈ 16 ರಂದು ಬೆಳಿಗ್ಗೆ 11 ಗಂಟೆಗೆ ಕಚೇರಿ ನರ್ಸರಿ, ಬಂಟ್ವಾಳ, ಅಪರಾಹ್ನ 4 ಗಂಟೆಗೆ ವಿಟ್ಲ ತೋಟಗಾರಿಕೆ ಕ್ಷೇತ್ರ, ಬಂಟ್ವಾಳ, ಜುಲೈ 17 ರಂದು ಬೆಳಿಗ್ಗೆ 11 ಗಂಟೆಗೆ ಕಚೇರಿ ನರ್ಸರಿ, ಬೆಳ್ತಂಗಡಿ, ಅಪರಾಹ್ನ 3.30 ಗಂಟೆಗೆ ಚಾರ್ಮಾಡಿ ತೋಟಗಾರಿಕೆ ಕ್ಷೇತ್ರ, ಬೆಳ್ತಂಗಡಿ, ಜುಲೈ 18 ರಂದು ಬೆಳಿಗ್ಗೆ 11 ಗಂಟೆಗೆ ಕಬಕ ತೋಟಗಾರಿಕೆ ಕ್ಷೇತ್ರ ಪುತ್ತೂರು, ಅಪರಾಹ್ನ 3.30 ಗಂಟೆಗೆ ಕಚೇರಿ ನರ್ಸರಿ, ಸುಳ್ಯ ಅಪರಾಹ್ನ 4.30 ಗಂಟೆಗೆ ಹೊಸಗದ್ದೆ ತೋಟಗಾರಿಕೆ ಕ್ಷೇತ್ರ, ಸುಳ್ಯ. ಜುಲೈ 19 ರಂದು ಬೆಳಿಗ್ಗೆ 11 ಗಂಟೆಗೆ ಪಡೀಲ್ ತೋಟಗಾರಿಕೆ ಕ್ಷೇತ್ರ, ಮಂಗಳೂರು, ಅಪರಾಹ್ನ 3.30 ಗಂಟೆಗೆ ಜಿಲ್ಲಾ ಸಸ್ಯಾಗಾರ, ಮಂಗಳೂರು ಇಲ್ಲಿಯ ತೆಂಗು ಫಸಲನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

Also Read  ಕಡಬದ ಹಿರಿಯ ಬಿಜೆಪಿ ಮುಖಂಡ ಮನವಳಿಕೆ ಉಮೇಶ್ ರೈ ಇನ್ನಿಲ್ಲ

ಆಸಕ್ತರು ಬಹಿರಂಗ ಹರಾಜಿನಲ್ಲಿ ಭಾಗವಹಿಸ ಬಹುದಾಗಿದೆ. ವಿಲೇವಾರಿ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಕಚೇರಿ ಹಾಗೂ ದೂರವಾಣಿ ಸಂಖ್ಯೆ: 08255-234102 (ಬಂಟ್ವಾಳ), 08257-232020 (ಸುಳ್ಯ), 8256-232148(ಬೆಳ್ತಂಗಡಿ), 08251-230905 (ಪುತ್ತೂರು), 0824-2423615(ಮಂಗಳೂರು) ಕ್ಷೇತ್ರಗಳನ್ನು ಸಂಪರ್ಕಿಸಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರೀಕ ಗೌರವ

 

error: Content is protected !!
Scroll to Top