ಅಘನಾಶಿನಿ ಒಡಲಿಗೆ ಮತ್ತೆ ಕುತ್ತು

(ನ್ಯೂಸ್ ಕಡಬ) newskadaba.com ಶಿರಸಿ, ಜೂನ್.28.ಅಘನಾಶಿನಿ ನದಿ ತನ್ನ ಸುತ್ತಲೂ ಯಾರೂ ಕಾಣದ ಅಪರೂಪದ ಕ್ಷಣ ಭಂಗುರ ನಿಧಿಗಳನ್ನು ತೋರ್ಪಡಿಸುತ್ತ ತನ್ನ ಪಾಡಿಗೆ ಹರಿಯುತ್ತಿತ್ತು. ಪಶ್ಚಿಮ ಘಟ್ಟದಲ್ಲಿನ ಅಳಿವನಂಚಿನ ಅನೇಕ ವನಸ್ಪತಿಗಳಿಗೂ ಆಶ್ರಯ ತಾಣವಾಗಿತ್ತು ಆದರೆ ಇದೀಗ ಅಘನಾಶಿನಿಗೆ ಅಪಾಯ ಎದುರಾಗಿದೆ.

ಇಲ್ಲಿನ ನದಿಯ ನೀರನ್ನು ತಿರುಗಿಸಿ ಮಹಾ ನಗರದ ಕುಡಿಯುವ ನೀರಿನ ಯೋಜನೆಗೆ ಸೇರ್ಪಡೆಗೊಳಿಸಲು ತಯಾರಿನಡೆಸಲಾಗಿದೆ ಎಂಬ ಸಚಿವರ ಹೇಳಿಕೆಯು ಆತಂಕವನ್ನು ಉಂಟುಮಾಡಿದೆ.ಶಿರಸಿಯ ಶಂಕರ ಹೊಂಡದಲ್ಲಿ ಜನಿಸಿದ ಅಘನಾಶಿನಿ ನದಿ ಕರಾವಳಿಯಲ್ಲಿ ಸಮುದ್ರ ಸೇರುತ್ತದೆ. ಕುಮಟಾದಲ್ಲಿ ಅಘನಾಶಿನಿ ಸಮುದ್ರ ಸೇರುವ ಮೊದಲು ಅನೇಕ ಕುಟುಂಬಗಳಿಗೂ ಜೀವನಾಧಾರವಾಗಿದೆ. ಈಗಾಗಲೇ ಕೃಷಿ ನೀರಾವರಿಗೂ ಆಸರೆಯಾಗಿರುವ ನದಿಯ ನೀರನ್ನು ಬಹುಪಾಲು ರಾಜಧಾನಿಗೆ ಹರಿಸಿದರೆ ಮಲೆನಾಡು ಮರಳು ನಾಡಾಗುತ್ತವೆ ಎಂಬ ಆತಂಕ ಪರಿಸರ ವಾದಿಗಳನ್ನು ಕಾಡುವಂತಾಗಿದೆ. ಅಘನಾಶಿನಿಗೆ ಈವರೆಗೆ ಒಂದೂ ಅಣೆಕಟ್ಟು ಇಲ್ಲ. ಕಳೆದ ದಶಕಗಳಿಗೆ ಹೋಲಿಸಿದರೆ ಬೇಸಿಗೆಯಲ್ಲಿ ನೀರಿನ ಹರಿವು ತೀರಾ ಇಳಿಕೆಯಾಗಿದೆ.

Also Read  ಚುನಾವಣೆಗೂ ಮುನ್ನ ಜನರ ಮನಸ್ಥಿತಿ ಅಳೆಯಲು ಸಮೀಕ್ಷೆ ನಡೆಸಿದ ಎನ್‌ಡಿಟಿವಿ..!​

ಅಘನಾಶಿನಿ ನದಿ ತನ್ನ ಸುತ್ತಲೂ ಯಾರೂ ಕಾಣದ ಅಪರೂಪದ ಕ್ಷಣ ಭಂಗುರ ನಿಧಿಗಳನ್ನು ಒಳಗೊಂಡಿದೆ. ಪಶ್ಚಿಮ ಘಟ್ಟದಲ್ಲಿನ ಅಳಿವನಂಚಿನ ಅನೇಕ ವನಸ್ಪತಿಗಳಿಗೂ ಆಶ್ರಯ ತಾಣ ಇದೇ ಆಗಿದೆ.ಸಹ್ಯಾದ್ರಿ ತಪ್ಪಲಿನ ಈ ನದಿ ನೀರನ್ನು ಒಯ್ಯುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಕಳೆದ ಆರೆಂಟು ವರ್ಷಗಳ ಹಿಂದೆಯೂ ಅಘನಾಶಿನಿ ನದಿ ನೀರನ್ನು ಶರಾವತಿ ನದಿಗೆ ಸೇರಿಸಿ ಶಿವಮೊಗ್ಗದ ಮೂಲಕ ಬೆಂಗಳೂರು ಒಯ್ಯುವ ಪ್ರಸ್ತಾಪ ಇತ್ತು. ಆಗಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಘನಾಶಿನಿ ತಟದಲ್ಲಿ ಸಾವಿರಾರು ಕುಟುಂಬಗಳು ಕೃಷಿ ಮಾಡುತ್ತಿವೆ. ಸಮುದ್ರದ ಮುಖಜ ಭೂಮಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಆದರೆ, ಇದೀಗ ಮತ್ತೆ ಇಂತಹ ಪ್ರಸ್ತಾಪ ಕೇಳಿ ಬಂದಿದ್ದು ಅಚ್ಚರಿ ಉಂಟುಮಾಡಿದೆ.

Also Read  ಪಿಯುಸಿ ಫಲಿತಾಂಶ ಪ್ರಕಟ   ➤ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ

 

error: Content is protected !!
Scroll to Top