ಕೆಂಪೇಗೌಡರ ಜೀವನಶೈಲಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿ ➤ ನಗರಾಭಿವೃದ್ದಿ ಸಚಿವ ಯು.ಟಿ ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.28.ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆದಿದ್ದು, ಇಲ್ಲಿ ಎಲ್ಲ ಜಾತಿ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಕೆಂಪೇಗೌಡರೇ ಕಾರಣ. ಕೆಂಪೇಗೌಡ ಜಯಂತಿಯನ್ನು ಕೇವಲ ಒಂದು ಜನಾಂಗಕ್ಕೆ ಸೀಮಿತಗೊಳಿಸದೇ, ಎಲ್ಲರೂ ಜೊತೆಯಾಗಿ ಆಚರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.

ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ರವೀಂದ್ರ ಸಭಾಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಇವರು, ಯಾರು ಇತಿಹಾಸ ತಿಳಿದುಕೊಳ್ಳುತ್ತಾರೋ ಅವರು ಇತಿಹಾಸ ನಿರ್ಮಾಣ ಮಾಡಲು ಸಾಧ್ಯ.

ಅವರನ್ನು ಸಮಾಜ ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ ಅಂತಹ ಸಾಲಿನಲ್ಲಿ ಕೆಂಪೇಗೌಡರಿದ್ದಾರೆ. ಇವರ ಜೀವನಶೈಲಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕೆಂಪೇಗೌಡರು ಬೆಂಗಳೂರು ಪ್ರದೇಶದ ಸಂಪನ್ಮೂಲಗಳನ್ನು ಅರಿತು ಮುಂದಿನ ಜನಾಂಗಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದರು. ಈಗಿನ ಕಾಲದಲ್ಲಿ ಈ ಸೌಕರ್ಯಗಳನ್ನು ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ.

Also Read  ಬೆಳ್ತಂಗಡಿ: ಮನೆಯ ಒಡೆಯನನ್ನು ಕಟ್ಟಿಹಾಕಿದ ದರೋಡೆಕೋರರು ► ನಗ - ನಗದು ಸೇರಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಕಳ್ಳರ ಪಾಲು

ಗೌಡರು ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆ ಇಂದು ಇಡೀ ವಿಶ್ವಕ್ಕೆ ವಿಸ್ತರಣೆಯಾಗಿದೆ. ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ನಾಡು ಕಂಡ ಶ್ರೇಷ್ಠ ವ್ಯಕ್ತಿ, ಬೆಂದಕಾಳೂರು ಎಂಬ ನಗರವನ್ನು ಕಟ್ಟುವ ಮೂಲಕ ಬೆಂಗಳೂರು ಎಂಬ ಹೆಸರಿನ ನಗರವಿಂದು ಜಗತ್ಪ್ರಸಿದ್ಧ ನಗರವಾಗಿ ಬೆಳೆಯಲು ಕಾರಣರಾದವರು ಕೆಂಪೇಗೌಡರು. ಉದ್ಯಾನ ನಗರಿ, ಉದ್ಯೋಗಿಗಳ, ಉದ್ಯೋಗದಾತರ ಆಶ್ರಯ ತಾಣ, ಅಭಿವೃದ್ಧಿಯ ಅವಕಾಶಗಳ ಆಗರ ಎಂಬಿತ್ಯಾದಿ ಹೆಸರುಗಳನ್ನು ಈ ಆಧುನಿಕ ಯುಗದಲ್ಲಿ ಗಳಿಸಿಕೊಂಡು ತನ್ನದೇ ಆದ ವಿಶಿಷ್ಟ ವೇಗದಲ್ಲಿ ಬೆಂಗಳೂರು ನಗರವು ಹಲವಾರು ಸಾಧನೆಗಳ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ ಇದು ಕೆಂಪೇಗೌಡರ ಸಾಧನೆ.

ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮವಾಗಿ ವೃದ್ಧಿಸಲು ಕೆಂಪೇಗೌಡರ ಇತಿಹಾಸದ ಅಧ್ಯಾಯನದ ಜೊತೆಗೆ ಅವರ ಜೀವನ ಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು.ಲೇಖಕರಾದ ಅರವಿಂದ ಚೊಕ್ಕಡಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷರಾದ ಕರಂಬಾರು ಮಹಮ್ಮದ್, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷರಾದ ಡಾ ದಾಮೋದರ ನಾರಾಲು, ಡಿ.ಸಿ.ಪಿ ಲಕ್ಷ್ಮೀ ಗಣೇಶ್, ವಿವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಎಂ ಎ ಉದಯಕುಮಾರ್ ಉಪಸ್ಥಿತರಿದ್ದರು.

Also Read  ➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ಡಿಸೆಂಬರ್ 06)

error: Content is protected !!
Scroll to Top