ಕಂದಾಯ ಇಲಾಖೆ ನೌಕರರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.28.ಕಂದಾಯ ಇಲಾಖೆಯ ದ.ಕ ಜಿಲ್ಲಾ ಘಟಕದ ಪ್ರಥಮ ದರ್ಜೆ ಸಹಾಯಕ/ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕರ ವೃಂದ, ದ್ವಿತೀಯ ದರ್ಜೆ ಸಹಾಯಕರ ವೃಂದ, ಗ್ರಾಮಕರಣಿಕರ ವೃಂದ, ಸಹಾಯಕರ/ ದಫೇದಾರ ವೃಂದ, ವಾಹನ ಚಾಲಕರ ವೃಂದ, ಡಿ’ ಗ್ರೂಪ್ ನೌಕರರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.


ಸರ್ವೋಚ್ಛ ನ್ಯಾಯಾಲಯವು ದಿನಾಂಕ:10-5-2019 ರಂದು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸುವಂತೆ ಸರ್ಕಾರದ ಆದೇಶದಲ್ಲಿ ನಿರ್ದೇಶಿಸಿದ್ದು, ಅದರಂತೆ ಸಂಬಂಧಪಟ್ಟ ನೌಕರರು ತಾಲೂಕು ಕಚೇರಿ/ ಸಹಾಯಕ ಆಯುಕ್ತರ ಕಚೇರಿಗಳಲ್ಲಿ ಸದ್ರಿ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಕೃತ ಜ್ಞಾಪನಾ ಪತ್ರ ಪ್ರಕಟವಾದ 7 ದಿನಗಳೊಳಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಕ್ತ ದಾಖಲೆಗಳೊಂದಿಉಗೆ ಸಲ್ಲಿಸಲು ತಿಳಿದ್ದಾರೆ. ನಿಗಧಿತ ಅವಧಿಯೊಳಗೆ ಆಕ್ಷೇಪಣೆಗಳು ಬಾರದಿದ್ದರೆ ಯಾವುದೇ ಆಕ್ಷೇಪಣೆಗಳಿಲ್ಲವೆಂದು ಪರಿಗಣಿಸಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಹೊರಡಿಸಲಾಗುವುದೆಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

Also Read  ಮನೆ ಮಂದಿಯನ್ನು ಬೆದರಿಸಿ ನಗ-ನಗದು ದರೋಡೆ

error: Content is protected !!
Scroll to Top