(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.28.ಶೈಕ್ಷಣಿಕ ವರ್ಷ 2019-20ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳಲ್ಲಿ / ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ, ಕುಶಾಲ ನಗರ/ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ/ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಕಲಾ ನಿಕಾಯ ಮತ್ತು ಎಂ.ಬಿ.ಎ (ಟೂರಿಸಂ ಮತ್ತು ಟ್ರಾವೆಲ್ ಮ್ಯಾನೇಜ್‍ಮೆಂಟ್) ಕೋರ್ಸಿಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು 05.07.2019ರವರೆಗೆ ವಿಸ್ತರಿಸಲಾಗಿದೆ.
ಕಲಾ ಮತ್ತು ಶಿಕ್ಷಣ ನಿಕಾಯಗಳಡಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆಯನ್ನು (ಕೌನ್ಸಿಲಿಂಗ್) ಸಂಬಂಧಪಟ್ಟ ವಿಭಾಗಗಳಲ್ಲೇ ನಡೆಸಲಾಗುವುದು.ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗಗಳ ಪ್ರವೇಶ ಪರೀಕ್ಷೆಗಳನ್ನು ಕ್ರಮವಾಗಿ ಜುಲೈ 6 ರಂದು ಬೆಳಿಗ್ಗೆ 10 ಗಂಟೆಗೆ ಮತ್ತು ಅಪರಾಹ್ನ 2 ಗಂಟೆಗೆ ನಡೆಸಲಾಗುವುದು ಹಾಗೂ ಎಂ.ಬಿ.ಎ (ಟೂರಿಸಂ ಮತ್ತು ಟ್ರಾವೆಲ್ ಮ್ಯಾನೇಜ್‍ಮೆಂಟ್) ಜುಲೈ 8 ರಂದು ಪೂರ್ವಾಹ್ನ 10 ಗಂಟೆಗೆ ನಡೆಸಲಾಗುವುದು. ಇನ್ನುಳಿದಂತೆ ಇತರ ಕೋರ್ಸುಗಳ ಪ್ರವೇಶ ಪರೀಕ್ಷೆಗಳ ದಿನಾಂಕಗಳಲ್ಲಿ ಯಾವುದೇ ಬದಲಾಣೆಗಳಿರುವುದಿಲ್ಲ.
ವಿಜ್ಞಾನ ವಿಷಯಗಳ ಪ್ರವೇಶಾತಿ ಪ್ರಕ್ರಿಯೆಯನ್ನು (ಕೌನ್ಸಿಲಿಂಗ್) ಜುಲೈ 8 ಹಾಗೂ 9 ಮತ್ತು ವಾಣಿಜ್ಯ ವಿಷಯಗಳ ಪ್ರವೇಶಾತಿ ಪ್ರಕ್ರಿಯೆಯನ್ನು (ಕೌನ್ಸಿಲಿಂಗ್) ಜುಲೈ 10 ಹಾಗೂ 11 ರಂದು ನಡೆಸಲಾಗುವುದು. ಸಂಯೋಜಿತ ಕಾಲೇಜುಗಳ ಸರಕಾರಿ ಕೋಟಾದಡಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆಯನ್ನು (ಕೌನ್ಸಿಲಿಂಗ್) ಜುಲೈ 12 ರಂದು ನಡೆಸಲಾಗುವುದು. ಹೆಚ್ಚಿನ ವಿವರಗಳನ್ನುwww.mangaloreuniversity.ac.in ನಲ್ಲಿ ಪಡೆಯಬಹುದು.