ಮಾರಕವಾಗುತ್ತಿದೆ ಮಲೇರಿಯಾ

(ನ್ಯೂಸ್ ಕಡಬ) newskadaba.com ಮುಲ್ಕಿ, ಜೂನ್.27.ಕಳೆದ ಎರಡು ತಿಂಗಳಿನಿಂದ ಮಲೇರಿಯಾ ಜ್ವರ ಬಾಧಿಸುತ್ತಿದ್ದು ಕಾರ್ನಾಡು ಸದಾಶಿವ ನಗರ, ಬಿಜಾಪುರ ಕಾಲನಿ ಹಾಗೂ ಆಶ್ರಯ ಕಾಲನಿಯ 25ಕ್ಕೂ ಹೆಚ್ಚು ಮಂದಿಗೆ ಮಲೇರಿಯಾ ಜ್ವರ ಕಂಡುಬಂದಿದೆ.

ಮೂಲ್ಕಿ ಸರಕಾರಿ ಆಸ್ಪತ್ರೆಗೆ ಕಳೆದೆರಡು ತಿಂಗಳಲ್ಲಿ ಚಿಕಿತ್ಸೆಗಾಗಿ ಬಂದ 25 ಮಂದಿಗೆ ಮಲೇರಿಯಾ ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.ನಗರ ಪಂಚಾಯತ್‌ ಮತ್ತು ಆರೋಗ್ಯ ಇಲಾಖೆಯ 10 ಜನರ ತಂಡವು ಮಲೇರಿಯಾ ಬಾಧಿತ ಪ್ರದೇಶದಲ್ಲಿ ಸರ್ವೇ ನಡೆಸುತ್ತಿರುವುದಲ್ಲದೆ ಮನೆಗಳ ಒಳಗೆ, ಪರಿಸರದಲ್ಲಿ ಫಾಗಿಂಗ್‌ ಮತ್ತು ಚರಂಡಿಗಳಿಗೆ ಔಷಧ ಸಿಂಪರಣೆ ಮಾಡುತ್ತಿದೆ. ಸ್ವತ್ಛತೆಯ ಕಾಮಗಾರಿಯನ್ನೂ ನಡೆಸಲಾಗುತ್ತಿದೆ. ಪ್ರಸ್ತುತ ಮಲೇರಿಯಾ ಪ್ರಕರಣ ನಿಯಂತ್ರಣದಲ್ಲಿದೆ.

Also Read  ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ.ನಾೈಕ್ ಅವರಿಗೆ ಸನ್ಮಾನ ಸಮಾರಂಭ

ಆಸ್ಪತ್ರೆಯಲ್ಲಿ ಈ ವರೆಗೆ ಕಳೆದೆರಡು ತಿಂಗಳ ಅವಧಿಯಲ್ಲಿ ದಾಖಲಾಗಿರುವ 25 ಮಂದಿ ಮಲೇರಿಯಾ ಪೀಡಿತರಲ್ಲಿ ಮೂವರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದ 22 ಮಂದಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ನಾಗರಿಕರು ತಮ್ಮ ಮನೆಗಳ ಪರಿಸರ ಹಾಗೂ ನಗರದ ಅಂಗಡಿ ಮುಂಗಟ್ಟುಗಳ ಎದುರಿನಲ್ಲಿ ಕಸ ಸಂಗ್ರಹ ಮಾಡಬಾರದು ಹಾಗೂ ಸೀಯಾಳದ ಚಿಪ್ಪುಗಳಲ್ಲಿ, ಟಯರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ನೀಡಲಾಗಿದೆ ಎಂದು ನಗರ ಪಂಚಾಯತ್‌ ತಿಳಿಸಿದೆ.

 

error: Content is protected !!
Scroll to Top