ಸೌಜನ್ಯ ಮಹಿಳಾ ಮಂಡಲ ➤ ಗ್ಯಾಸ್ ಬಳಕೆ ಮುಂಜಾಗೃತಾ ಮಾಹಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಪ್ರತೀ ಮನೆಗಳಲ್ಲಿ ದಿನ ನಿತ್ಯಉಪಯೋಗಿಸುವಗ್ಯಾಸ್ ಸಿಲಿಂಡರ್ ಮತ್ತುಅದರ ಬಳಕೆಯ ಬಗ್ಗೆ ಮುಂಜಾಗೃತಾ ಮಾಹಿತಿಯನ್ನು ಸೌಜನ್ಯ ಮಹಿಳಾ ಮಂಡಳಿಯಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿ ಮೋಹನ್‍ಅಮೀನ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರಿಗೆ ಸಹಾಯಕರಾಗಿಉಪೇಂದ್ರಆಚಾರ್ಯರು ಉಪಸ್ಥಿತರಿದ್ದರು. ಗ್ಯಾಸ್ ಬಳಕೆಯ ಸಂದರ್ಭದಲ್ಲಿ ಪ್ರಸ್ತುತಸಮಾಜದಲ್ಲಾಗುವ ದುರ್ಘಟನೆಗಳನ್ನು ಉಲ್ಲೇಖಿಸುತ್ತಾ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.ಗೌರವಾಧ್ಯಕ್ಷೆರೋಹಿಣಿ ಕೆ. ಎ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ರತ್ನಾವತಿಜೆ. ಬೈಕಾಡಿ ಮತ್ತುರಮಾಎನ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಮಂಡಳಿಯ ಅಧ್ಯಕ್ಷೆ ಹೇಮಲತಾರಮೇಶ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ವರಿಎಸ್ ವಂದಿಸಿದರು. ಜೊತೆ ಕಾರ್ಯದರ್ಶಿ ಶೈಲಜಾ ಎ. ರಾವ್ ನಿರೂಪಿಸಿದರು.

Also Read  ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಕಟ್ಟದೆ ₹2.65 ಕೋಟಿ ದುರ್ಬಳಕೆ.!

error: Content is protected !!
Scroll to Top