ವಿವಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27. ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿ ಸಂಘ(ರಿ) ಹಂಪನಕಟ್ಟೆ ಮಂಗಳೂರು ಇದರ ವಿಶೇಷ ಮಹಾಸಭೆ ಮತ್ತು ವಾರ್ಷಿಕ ಮಹಾಸಭೆಯು ಜೂನ್ 23 ರಂದು ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಸಂಘದ ಅಧ್ಯಕ್ಷ ಧರ್ಮಣ್ಣ ನಾೈಕ್ ಅಧ್ಯಕ್ಷತೆಯಲ್ಲಿ ನಡೆಯಿತು.


ಮಹಾಸಭೆಯಲ್ಲಿ ವಿ.ವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಉದಯಕುಮಾರ್ ಇವರು ಚುನಾವಣಾಧಿಕಾರಿಯಾಗಿ 2019-20 ನೇ ಸಾಲಿಗೆ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.ಸಂಘದ ಅಧ್ಯಕ್ಷರಾಗಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಉಪಾಧ್ಯಕ್ಷರಾಗಿ ಶುಭೋದಯ ಕೂಡ್ಲು, ಬಿ.ಲೋಹಿದಾಸ್, ಕಾರ್ಯದರ್ಶಿಯಾಗಿ ಯು ಮೋಹನ್ ರಾವ್, ಜತೆ ಕಾರ್ಯದರ್ಶಿಯಾಗಿ ಜೆ.ವಿ ಶೆಟ್ಟಿ, ಕೋಶಾಧಿಕಾರಿಯಾಗಿ ಡಿ ಶ್ರೀನಿವಾಸ ನಾೈಕ್ ಇವರು ಪದಾಧಿಕಾರಿಗಳಾಗಿ ಆಯ್ಕೆಯಾದರು.ವಿಜಯ ಶೆಟ್ಟಿ, ಬಿ ಧರ್ಮಣ್ಣ ನಾೈಕ್, ಬಿ ಯನ್ ಸನೀಲ್, ಸುರೇಶ್ ರಾವ್ ಲಾಡ್, ಯನ್ ಕೆ ಮೋಹನ್ ದಾಸ್, ಸೈಯದ್ ಜಬೇರ್ ಶಾಹ, ಯನ್ ಶಶೀಧರ್ ಶೆಟ್ಟಿ, ಪ್ರಕಾಶ್ ಪೈ, ಮುರಲೀಧರ ಕಾಮತ್, ಶೇಕ್ ನಜೀರ್ ಹೈದರ್, ರಾಮದಾಸ ಗೌಡ ಎಸ್, ರವೀಂದ್ರ ಏ.ಕೆ ಇವರು ಆಡಳಿತ ಸಮಿತಿ ಸದಸ್ಯರಾಗಿ ಆಯ್ಕೆಯಾದರು.

Also Read  ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾರ್ಯಕಾರಿ ಸಭೆ ಹಾಗೂ ಜನಧ್ವನಿ ಸಮಾವೇಶ ಪೂರ್ವ ಭಾವಿ ಸಭೆ..!

error: Content is protected !!
Scroll to Top