(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27. ಜೂನ್ 26 ರಂದು ಜಿಲ್ಲಾ ಗೃಹರಕ್ಷಕ ದಳದ ಕಚೇರಿ, ಮೇರಿಹಿಲ್ ಕಚೇರಿಯಲ್ಲಿ ಮಂಗಳೂರು ಘಟಕದ ಗೃಹರಕ್ಷಕರಾದ ಹಮೀದ್ ಪಾವಲ ಇವರನ್ನು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಹಮೀದ್ ಪಾವಲರವರು ತೊಕ್ಕೊಟ್ಟು ಬಸ್ಸ್ ಸ್ಟಾಂಡ್ ಹತ್ತಿರ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೊಪಿಯನ್ನು ಹಿಡಿಯುವಲ್ಲಿ ಸಹಕರಿಸಿ ಪೊಲೀಸ್ ಇಲಾಖೆಗೆ ನೆರವಾಗಿರುವುದರಿಂದ ಇವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಸನ್ಮಾನಿಸಿದರು. ಇಂತಹ ಗೃಹರಕ್ಷಕರಿಂದ ಇಲಾಖೆಯ ಗೌರವ ಹೆಚ್ಚುತ್ತದೆ. ಹಮೀದ್ ಪಾವಲರವರು ಇತರ ಗೃಹರಕ್ಷಕರಿಗೆ ಮಾದರಿಯಾಗಿದ್ದು ಅವರ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದರು.
ಇಂತಹ ಗೃಹರಕ್ಷಕರು ಸಮಾಜದ ಆಸ್ತಿ ಎಂದರು.. ಸನ್ಮಾನ ಸ್ವೀಕರಿಸಿದ ಹಮೀದ್ ಪಾವಲ ಅವರು ಮಾತನಾಡಿ ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ನನ್ನ ಕರ್ತವ್ಯವನ್ನು ಗುರುತಿಸಿ ಸನ್ಮಾನಿಸಿದ ಸಮಾದೇಷ್ಠರಿಗೆ ಹಾಗೂ ಉಪ ಸಮಾದೇಷ್ಠರಿಗೆ ಧನ್ಯವಾದ ತಿಳಿಸಿದರು.ಕಾರ್ಯಕ್ರಮದಲ್ಲಿ ಕಚೇರಿಯ ಅಧೀಕ್ಷಕರಾದ ಎಂ. ರತ್ನಾಕರ, ಪ್ರಥಮ ದರ್ಜೆ ಸಹಾಯಕರಾದ ಅನಿತಾ ಟಿ. ಎಸ್, ಹಾಗೂ ಬಂಟ್ವಾಳ ಘಟಕದ ಪ್ರಭಾರ ಘಟಕಾಧಿಕಾರಿಯಾದ ಐತ್ತಪ್ಪರವರು ಮತ್ತು ಗೃಹರಕ್ಷಕರು ಉಪಸ್ಥಿತರಿದ್ದರು.