ಹಸಿ, ಒಣ ಕಸ ವಿಂಗಡಣೆ ಮಾಡುವಂತೆ ನಾಗರೀಕರಲ್ಲಿ ಪಾಲಿಕೆ ಮನವಿ ➤ನಿಯಮ ಉಲ್ಲಂಘಿಸಿದ್ದಲ್ಲಿ ದಂಡ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಮಂಗಳೂರು ನಗರ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣ ಕಸವಾಗಿ ವಿಂಗಡಿಸಿ ಮಹಾನಗರಪಾಲಿಕೆಯ ವತಿಯಿಂದ ಮಾಡಲಾಗಿರುವ ಸಂಗ್ರಹಣಾ ವ್ಯವಸ್ಥೆಗೆ ನೀಡುವಂತೆ ವಿನಂತಿಸಲಾಗಿದೆ.


ಜುಲೈ 1 ರಿಂದ ವಾರದ ಎಲ್ಲಾ ದಿನಗಳು (ಶುಕ್ರವಾರ ಹೊರತು ಪಡಿಸಿ) ಹಸಿ ಕಸವನ್ನು ಸಂಗ್ರಹಿಸಲಾಗುವುದು ಹಾಗೂ ಶುಕ್ರವಾರದಂದು ಒಣಕಸವನ್ನು ಮಾತ್ರ ಸಂಗ್ರಹಿಸಲಾಗುವುದು. ಮಂಗಳೂರು ಮಹಾನಗರಪಾಲಿಕೆಯು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ನ್ನು ಅನುಷ್ಟಾನಗೊಳಿಸಲು ಕ್ರಮವಹಿಸಿದೆ. ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ರಂತೆ (Municipal Solid Waste Management Rules, 2016) ಪ್ರತಿ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು. ಘನತ್ಯಾಜ್ಯವನ್ನು ವಿಂಗಡಣೆ ಮಾಡಿ ನಿಗಿದಿತ ದಿನದಂದು ಹಸಿಕಸ ಮತ್ತು ಒಣಕಸ ಪ್ರತ್ಯೇಕವಾಗಿ ನೀಡದಿದ್ದಲ್ಲಿ ಮಹಾನಗರಪಾಲಿಕೆಯ ವತಿಯಿಂದ ಕಸ ಸಂಗ್ರಹಣೆಯನ್ನು ಸ್ವೀಕರಿಸಲಾಗುವುದಿಲ್ಲ.

Also Read  ಮಂಗಳೂರು: ಕೆಲಸದ ವೇಳೆ ಆಕಸ್ಮಿಕವಾಗಿ ಕುಸಿದ ಮೇಲ್ಛಾವಣಿ ➤ ಯುವಕನೋರ್ವ ಮೃತ್ಯು..!


ರಸ್ತೆಯ ಬದಿಯಲ್ಲಿ ಬಿಸಾಡುವವರಿಗೆ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಹಾಗೂ ಮಹಾನಗರಪಾಲಿಕೆಯ ನೈರ್ಮಲಿಕರಣ ಮತ್ತು ಘನತ್ಯಾಜ್ಯ ವಸ್ತುಗಳ ಬೈಲಾ 2018ರ ಪ್ರಕಾರ (ರೂ. 100/- ರಿಂದ ರೂ. 25,000/- ವರೆಗೆ) ದಂಡ ವಿಧಿಸಲು ಕ್ರಮವಹಿಸಲಾಗುವುದು. ನಿಷೇಧಿತ ಪ್ಲಾಸ್ಟಿಕ್ ಬಳಕೆ ಯಾ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸತಕ್ಕದ್ದು, ತಪ್ಪಿದಲ್ಲಿ ದಂಡ ಸಹಿತ ವಶಪಡಿಸಲಾಗುವುದು ಮತ್ತು ಸಕ್ಷಮ ಪ್ರಾಧಿಕಾರದಲ್ಲಿ ಕೇಸು ದಾಖಲಿಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top