ಪ್ರಾಪರ್ಟಿ ಕಾರ್ಡ್ ಗಾಗಿ ಮುಗಿಬಿದ್ದ ಜನರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಆದೇಶ ಅಂತಿಮಗೊಂಡ ಬಳಿಕ ಯುಪಿಒಆರ್ ಕಚೇರಿಯಲ್ಲಿ ದಿಢೀರ್ ಜನದಟ್ಟಣೆ ಕಂಡುಬಂದಿದೆ.ಪ್ರಾಪರ್ಟಿ ಕಾರ್ಡ್ಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಿದ್ದು, ಕಚೇರಿ ಸಿಬ್ಬಂದಿ ನಿಭಾಯಿಸಲಾಗದೆ ಕಂಗಾಲಾಗಿದ್ದಾರೆ.

ಕರಡು ಹಾಗೂ ಅಂತಿಮ ಪ್ರಾಪರ್ಟಿ ಕಾರ್ಡ್ ಪಡೆಯಲು ಬರುವವರು ಅವರೊಂದಿಗೆ ಕಡ್ಡಾಯ ಎಂದು ಗಾಬರಿಯಾಗಿ ಅರ್ಜಿ ಹಾಕಲು ಬರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಕೆಲದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪ್ರಾಪರ್ಟಿ ಕಾರ್ಡ್ ಬಗ್ಗೆ ಸಾರ್ವಜನಿಕರು ಆತುರಪಡುವ, ಅನಗತ್ಯ ಆತಂಕಗೊಳ್ಳುವ ಅಗತ್ಯವಿಲ್ಲ. ಸದ್ಯ ಆಸ್ತಿಯ ಮಾರಾಟಕ್ಕೆ ನೋಂದಣಿ ಸಂದರ್ಭ ಮಾತ್ರ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ.ಪ್ರಾಪರ್ಟಿ ಕಾರ್ಡ್ ವಿತರಣೆ ಸುಗಮ ಉದ್ದೇಶದಿಂದ ಅರ್ಜಿ ಹಾಕುವ ವೇಳೆ ದಾಖಲೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೆ 48 ಗಂಟೆಗಳಲ್ಲಿ ಕರಡು ಕಾರ್ಡ್ ವಿತರಣೆ ಮಾಡುವಂತೆ ದಿನಾಂಕ ನಮೂದಿಸಿ ಟೋಕನ್ ನೀಡಲಾಗುತ್ತದೆ. ನೀಡಲಾದ ದಿನಾಂಕದಂದು ಬಂದು ಕಾರ್ಡ್ ಸಂಗ್ರಹಿಸಬಹುದು. ಆದರೆ ಸದ್ಯ ಬರುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಫೀಲ್ಡ್ ವೆರಿಫಿಕೇಶನ್, ಅಳತೆ ಅಗತ್ಯವಿರುವುದರಿಂದ 10 ದಿನ ಸಮಯ ಪಡೆಯಲಾಗುತ್ತಿದೆ.

Also Read  ಪಿಯುಸಿ ಪರೀಕ್ಷೆ ಬೆನ್ನಿಗೇ ಮೂವರು ವಿದ್ಯಾರ್ಥಿಗಳ ಮರಣ..! ➤ ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು                    

error: Content is protected !!
Scroll to Top