ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಪರಿಶೀಲಿಸಿದ ಬಿ.ವೈ ರಾಘವೇಂದ್ರ

(ನ್ಯೂಸ್ ಕಡಬ) newskadaba.com ಉಪ್ಪುಂದ, ಜೂನ್.26. ಮರವಂತೆ- ತ್ರಾಸಿ ಕರಾವಳಿ ತೀರ ಸಂರಕ್ಷಣೆ ಕಾಮಗಾರಿ ಹಾಗೂ ಮರವಂತೆ ಬ್ರೇಕ್‌ ವಾಟರ್‌ ಕಾಮಗಾರಿ ಪ್ರದೇಶಗಳಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ ರಾಘವೇಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರವಂತೆ ಬ್ರೇಕ್‌ ವಾಟರ್‌ ಕಾಮಗಾರಿ ಪರಿಶೀಲಿಸಿ ಮೀನುಗಾರರೊಂದಿಗೆ ಮಾತನಾಡಿದ ಅವರು ಬಾಕಿ ಉಳಿದಿರುವ ಬ್ರೇಕ್‌ ವಾಟರ್‌ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮೀನುಗಾರಿಕಾ ರಸ್ತೆಗೆ 27 ಲಕ್ಷ ರೂ. ಅನುದಾನದಲ್ಲಿ ರಸ್ತೆ ದುರಸ್ತಿ ಮಾಡುವುದಾಗಿ ತಿಳಿಸಿದರು. ಈ ಕುರಿತು ಮಾತನಾಡಿದ ಸಂಸದರು ಈ ಭಾಗದ ಮೀನುಗಾರರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಡಲ್ಕೊರೆತವನ್ನು ತಡೆಯುವ ತಡೆಗೋಡೆ ನಿರ್ಮಾಣಕ್ಕೆ ರೂ.50ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದರು. ಕಳೆದ ಬಾರಿ ಕಡಲ್ಕೊರೆತದಲ್ಲಿ ಸಂತ್ರಸ್ತರಾದ ಮೀನುಗಾರರ 6 ಕುಟುಂಬದವರಿಗೆ ಪರ್ಯಾಯ ಸ್ಥಳಾವಕಾಶ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಮಸ್ತ ಮೀನುಗಾರರ ವತಿಯಿಂದ ಸಂಸದರನ್ನು ಸಮ್ಮಾನಿಸಲಾಯಿತು.

Also Read  ವೃದ್ದೆಗೆ ಮೋಸ; ಚಿನ್ನಾಭರಣ ಕಳವು

error: Content is protected !!
Scroll to Top