(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಮಂಗಳೂರು ಇಲ್ಲಿಗೆ 2 ಜನ ಡಾಟಾ ಎಂಟ್ರಿ ಅಪರೇಟರ್/ಕಂಪ್ಯೂಟರ್ ಅಪರೇಟರ್‍ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಿದೆ.
ಆಸಕ್ತ ಮಾನವ ಸಂಪನ್ಮೂಲವನ್ನು ಸರಬರಾಜು ಮಾಡುವ ಸ್ವಂತ/ಪಾಲುದಾರಿಕೆ/ಸಂಸ್ಥೆಗಳು ಜುಲೈ 22 ರಂದು ಪೂರ್ವಾಹ್ನ 11 ಗಂಟೆಯ ಒಳಗೆ ಜಂಟಿ ನಿರ್ದೇಶಕರು (ಪ್ರ) ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಮಂಗಳೂರು ಕಚೇರಿಗೆ ಸಿಂಗಲ್ ಟೆಂಡರನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು. ಜುಲೈ 23 ರಂದು ಅಪರಾಹ್ನ 12 ಗಂಟೆಗೆ ಟೆಂಡರ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಟೆಂಡರ್ ನಮೂನೆಯನ್ನು ಕಚೇರಿ ಅವಧಿಯಲ್ಲಿ ಜಂಟಿ ನಿರ್ದೇಶಕರು (ಪ್ರ) ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಮಂಗಳೂರು ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
Also Read ಕಡಬ: ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷರಾಗಿ ➤ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮೋಹನ್ ಕೆರೆಕೋಡಿ ಆಯ್ಕೆ