ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆ ➤ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅದಿsನಿಯಮ 1997 ರ ಕಲಂ 25 ರನ್ವಯ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನ/ ದೈವಸ್ಥಾನಕ್ಕೆ ಮೂರು ವರ್ಷಗಳ ಅವಧಿಗಾಗಿ 9 ಜನ ಸದಸ್ಯರನ್ನು ಒಳಗೊಂಡು ವ್ಯವಸ್ಥಾಪನಾ ಸಮಿತಿಯನ್ನು ರಚಿಸುವುದ್ದಾಕ್ಕಾಗಿ ಆಸಕ್ತಿವುಳ್ಳ ಭಕ್ತಾಧಿಗಳಿಂದ ನಿಗದಿತ ನಮೂನೆ- 1 (ಬಿ) (22 ನೇ ನಿಯಮ) ದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತ ಭಕ್ತಾಧಿಗಳು ನಿಗಧಿತ ಅರ್ಜಿ ನಮೂನೆ 1 (ಬಿ) ಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 19 ರಂದು ಸಂಜೆ 5.30 ಗಂಟೆ ಒಳಗಾಗಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ದ.ಕ.ಮಂಗಳೂರು ಇಲ್ಲಿಗೆ ಸ್ವೀಕೃತವಾಗುವಂತೆ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆಗಳು ಸಹಾಯಕ ಆಯುಕ್ತರ ಕಚೇರಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಅವರಣ, ಮಂಗಳೂರು ದ.ಕ. ಇಲ್ಲಿ ಲಭ್ಯವಿದೆ.

ವ್ಯವಸ್ಥಾಪನಾ ಸಮಿತಿಯ ಅವಧಿ ಮುಕ್ತಾಯವಾದ ಪ್ರವರ್ಗ ‘ಬಿ’ ಗೆ ಸೇರಿದ ದೇವಸ್ಥಾಗಳು: ಮಂಗಳೂರು ತಾಲೂಕು- ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಇರುವೈಲು, ಶ್ರೀ ಆದಿಜನಾರ್ಧನ ದೇವಸ್ಥಾನ, ಶೀಮಂತೂರು. ಪುತ್ತೂರು ತಾಲೂಕು – ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ, ಬಲ್ನಾಡು, ಶ್ರೀ ದುರ್ಗಾಂಬಾ ದೇವಸ್ಥಾನ, ಕಡಬ , ಬೆಳ್ತಗಂಡಿ ತಾಲೂಕು- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶಿಬಾಜೆ, ಮೊಂಟೆತ್ತಡ್ಕ, ಶ್ರೀ ವೈದ್ಯನಾಥೇಶ್ವರ ದೇವಸ್ಥಾನ, ಶಿಶಿಲ, ಶ್ರೀ ಸೂರ್ಯನಾರಾಯಣ ದೇವಸ್ಥಾನ, ನಾರಾವಿ, ಶ್ರೀ ಲೋಕನಾಥೇಶ್ವರ ದೇವಸ್ಥಾನ, ನಿಡಿಗಲ್ ಕನ್ಯಾಡಿ, ಸುಳ್ಯ ತಾಲೂಕು- ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ.

Also Read  3.2 ಕೆ.ಜಿ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ ➤ ಇಬ್ಬರು ಆರೋಪಿಗಳು ಅರೆಸ್ಟ್

ಪ್ರವರ್ಗ ‘ಸಿ’ ಗೆ ಸೇರಿದ ದೇವಸ್ಥಾಗಳು: ಮಂಗಳೂರು ತಾಲೂಕು- ಶ್ರೀ ಬೆಂಕಿನಾಥೇಶ್ವರ ದೇವಸ್ಥಾನ, ಬಾಳ ಕಳವಾರು, ಶ್ರೀ ಉಳಿಯತ್ತಾಯ ದೈವಸ್ಥಾನ, ಉಳ್ಳಾಲ, ಬಂಟ್ವಾಳ ತಾಲೂಕು- ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ, ದೇಲಂತಬೆಟ್ಟು, ಕಳ್ಳಿಗೆ, ಶ್ರೀ ಕಾನಲ್ತಾಯ ದೈವಸ್ಥಾನ, ಬರಿಮಾರು, ಶ್ರೀ ನೀಲಿಕೊಡಮಂತ್ತಾಯ ದೈವಸ್ಥಾನ, ಅಜ್ಜಿಬೆಟ್ಟು, ಶ್ರೀ ಕೋದಂಡರಾಮಚಂದ್ರ ದೇವಸ್ಥಾನ, ನರಿಕೊಂಬು. ಬೆಳ್ತಂಗಡಿ- ಶ್ರೀ ನಾಗಬ್ರಹ್ಮ ದೇವಸ್ಥಾನ, ಮೇಲಂತಬೆಟ್ಟು, ಶ್ರೀ ನಾಳಾ ದುರ್ಗಾ ಪರಮೇಶ್ವರೀ ದೇವಸ್ಥಾನ ನ್ಯಾಯ., ಶ್ರೀ ಬಂಗಾಡಿ ಹಾಡಿ ದೈವ ಇಂದಬೆಟ್ಟು, ಶ್ರೀ ಕೊಲ್ಲಿ ದುರ್ಗಾಪರಮೇಶ್ವರೀ ದೇವಸ್ಥಾನ, ಮಿತ್ತಬಾಗಿಲು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾವರ.ಪುತ್ತೂರು-ಶ್ರೀ ರಾಮಕುಂಜೇಶ್ವರ ದೇವಸ್ಥಾನ, ರಾಮಕುಂಜ, ಶ್ರೀ ಶ್ರೀಕಂಠ ಸ್ವಾಮೀ ಮಹಾಗಣಪತಿ ದೇವಸ್ಥಾನ, ಕಡಬ, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಬಿಳಿನೆಲೆ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೆಯ್ಯೂರು.

Also Read  ಹರಿಹರ ಪಲ್ಲತಡ್ಕದಲ್ಲಿ ಭೀಕರ ಶಬ್ದ ➤ ಬೆಚ್ಚಿ ಬಿದ್ದ ಸ್ಥಳೀಯರು

 

ಸುಳ್ಯ-ಶ್ರೀ ಅಡ್ಕಾರು ಸುಬ್ರಮಣ್ಯ ದೇವರು, ಜಾಲ್ಸೂರು, ಶ್ರೀ ಶಂಕಪಾಲ ಸುಬ್ರಮಣ್ಯ ದೇವಸ್ಥಾನ ಮತ್ತು ಬಚ್ಚನಾಯಕ ದೇವಸ್ಥಾನ ಏಣೆಕಲ್ಲು, ಶ್ರೀ ಶಂಕಪಾಲ ಸುಬ್ರಮಣ್ಯ ದೇವಸ್ಥಾನ ವಳಂಬೆ ಗುತ್ತಿಗಾರು, ಶ್ರೀ ಚೊಕ್ಕಾಡಿ ಉಳ್ಳಾಕ್ಲು ಯಾನೆ ನಾಯರ್ ಭೂತ ದೈವಸ್ಥಾನ , ಅಮರ ಪಡ್ನೂರು, ಶ್ರೀ ಕಾಯರ್ತೋಡಿ ಮಹಾ ವಿಷ್ಣಮೂರ್ತಿ ದೈವಸ್ಥಾನ ಸುಳ್ಯ, ಕಸಬಾ
ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಹಾಗೂ ಪೊಲೀಸು ಸತ್ಯಾಪನಾ ವರದಿಯೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಹಾಯಕ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top