ಕರ್ನಾಟಕ ಯಕ್ಷಗಾನ ಅಕಾಡೆಮಿ ➤ 2019-20ನೇ ಸಾಲಿನ 2 ತಿಂಗಳ ಯಕ್ಷಗಾನ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ 2019-20ನೇ ಸಾಲಿನಲ್ಲಿ ಸಾಮಾನ್ಯ ಯೋಜನೆಯಡಿ 2 ತಿಂಗಳ ಯಕ್ಷಗಾನ ತರಬೇತಿಗೆ(ತೆಂಕುತಿಟ್ಟು, ಬಡಗುಬೆಟ್ಟು, ಬಡಾಬಡಗುತಿಟ್ಟು) ಕಲಾವಿದರುಗಳಿಂದ / ಕಲಾಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.


ಯಕ್ಷಗಾನ ತರಬೇತಿಯನ್ನು ಕನಿಷ್ಠ 10 ಮಂದಿಗೆ ನೀಡಬಯಸುವ ಆಸಕ್ತ ಕಲಾವಿದರು/ಕಲಾಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. 2018-19ನೇ ಸಾಲಿನಲ್ಲಿ ಯಕ್ಷಗಾನ ತರಬೇತಿಗೆ ಅವಕಾಶ ಪಡೆದ ಕಲಾಸಂಸ್ಥೆ/ಕಲಾವಿದರಿಗೆ ಅವಕಾಶವಿರುವುದಿಲ್ಲ. ಉಳಿದ ಕಲಾಸಂಸ್ಥೆ/ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದೆ.ಯಕ್ಷಗಾನ ತರಬೇತಿ ನೀಡಬಯಸುವ ಆಸಕ್ತ ಕಲಾವಿದರುಗಳು/ಕಲಾಸಂಸ್ಥೆಗಳು ತಮ್ಮ ಮನವಿಯನ್ನು ಜುಲೈ 15 ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ ರಸ್ತೆ, ಬೆಂಗಳೂರು 560002 ಇಲ್ಲಿಗೆ ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ದೂರವಾಣಿ ಸಂಖ್ಯೆ 080-22113146 ಸಂಪರ್ಕಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ !      ➤ ಆಟೋ ಚಾಲಕ ಪುರುಷೋತ್ತಮರವರಿಗೆ ಹೊಸ ರಿಕ್ಷಾ, 5 ಲಕ್ಷ ಸಹಾಯಧನ ಹಸ್ತಾಂತರ

error: Content is protected !!
Scroll to Top