ಮದುವೆ ಸವಿನೆನಪಿಗೆ ಪುಸ್ತಕ ತಾಂಬೂಲದ ವಿಶಿಷ್ಟ ಪರಿಕಲ್ಪನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.24.ಮದುವೆ ಮನೆಯಲ್ಲಿ ಊಟ ಮುಗಿಸಿ ಹೊರಡುವಾಗ ಕೊನೆಗೆ ಸವಿನೆನಪಿಗೆಂದು ಸ್ವೀಟ್ ಬಾಕ್ಸ್ ನೀಡುವುದು ಸಾಮಾನ್ಯ. ಇಂಥದೇ ಭಿನ್ನ ಚಿಂತನೆ ಮಾಡಿದ ನಿವೃತ್ತ ಸಮಾಜಶಾಸ್ತ್ರ ಉಪನ್ಯಾಸಕ, ರಾಷ್ಟ್ರೀಯ ಚಿಂತಕ ಚ.ನ.ಶಂಕರ್ ರಾವ್ ತನ್ನ ಮೂವರು ಮಕ್ಕಳ ಮದುವೆ ಸವಿನೆನಪಿಗೆ ಪುಸ್ತಕ ತಾಂಬೂಲದ ವಿಶಿಷ್ಟ ಪರಿಕಲ್ಪನೆ ಸಮಾಜದ ಮುಂದಿಟ್ಟಿದ್ದಾರೆ.

ಚ.ನ ಶಂಕರ್ ರಾವ್ ಪುತ್ರಿ ದೀಪ್ತಿ ಹಾಗೂ ರಾಹುಲ್ ವಿವಾಹ ಜೂನ್ 9ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆದಿತ್ತು. ಮದುವೆಯ ಭೋಜನ ಆತಿಥ್ಯದ ಬಳಿಕ ಆಗಮಿಸಿದ ಬಂಧುಗಳಿಗೆ ‘ಕ್ರಾಂತಿಕಾರರ ಕ್ರಾಂತಿವೀರ ವಿನಾಯಕ ದಾಮೋದರ ಸಾವರ್ಕರ್’ ಎಂಬ ಕೃತಿ ಉಡುಗೊರೆಯಾಗಿ ನೀಡಿದ್ದಾರೆ. ಚ.ನ ಶಂಕರ್ ರಾವ್ ಅವರ ಈ ವಿಭಿನ್ನ ಪರಿಕಲ್ಪನೆಗೆ ನೆಂಟರು, ಆಪ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಂತ ಪ್ರಕಾಶನದ ಮೂಲಕ ತಾವೇ ಬರೆದ ಮುದ್ರಿಸಿ ಹಂಚಿದ್ದಾರೆ.

Also Read  ಅಂಗನವಾಡಿ ನೇಮಕಾತಿಗೆ ಅರ್ಜಿ ಆಹ್ವಾನ

ಪುಸ್ತಕ ತಾಂಬೂಲ ಮೂಲಕ ದೇಶದ ಮಹಾನ್ ದೇಶಭಕ್ತರನ್ನೊಮ್ಮೆ ನೆನಪಿಸಿಕೊಳ್ಳುವುದರ ಜತೆಗೆ, ನಮ್ಮ ಮಾತೃಭಾಷೆ ಕನ್ನಡ ಸೊಗಡನ್ನು ಸವಿಯಲು ಅವಕಾಶ ಮಾಡಿಕೊಡುವ ಸಣ್ಣ ಪ್ರಯತ್ನ ಮಾಡಿದ್ದಾಗಿ ಚ.ನ. ಶಂಕರ್ ರಾವ್ ಹೇಳುತ್ತಾರೆ. ಪ್ರತಿ ಮದುವೆಯಲ್ಲೂ ಈ ರೀತಿಯ ಪ್ರಯತ್ನ ಆದಾಗ ಜನರನ್ನು ಪುಸ್ತಕ ಓದಲು ಪ್ರೇರೇಪಿಸಿದಂತಾಗುತ್ತದೆ. ದೇಶಕ್ಕಾಗಿ ದುಡಿದ ವೀರರನ್ನು ಮನೆಮನೆಯಲ್ಲೂ ಸ್ಮರಿಸಿದಂತೆಯೂ ಆಗುತ್ತದೆ ಎಂಬುವುದು ಅವರ ದೂರದೃಷ್ಟಿ.

error: Content is protected !!
Scroll to Top