ಅಭಿವೃದ್ಧಿಯ ಹೆಸರಿನಲ್ಲಿ ನಗರದ ಹಸಿರು ಮಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.24.ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿ ಮರಗಳನ್ನು ಕಡಿಯಲಾಗುತ್ತಿದ್ದು, ಮಹಾನಗರ ಪಾಲಿಕೆಯ 60 ವಾರ್ಡ್ಗಳ ಪೈಕಿ ಬಂದರು ಮತ್ತು ಕುದ್ರೋಳಿ ವಾರ್ಡ್ಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮರಗಿಡಗಳಿವೆ.ಕುದ್ರೋಳಿ, ಬಂದರು ವಾರ್ಡ್ಗಳಲ್ಲಿ ಕೇವಲ ಶೇ. 0.5ನಷ್ಟು ಪ್ರದೇಶದಲ್ಲಿ ಮಾತ್ರ ಮರಗಿಡಗಳಿವೆ.

ವಿಚಾರವನ್ನು ಅರಣ್ಯ ಇಲಾಖೆ ಇದೀಗ ಗಂಭೀರವಾಗಿ ಪರಿಗಣಿ ಸಿದ್ದು, ಎರಡೂ ವಾರ್ಡ್ಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 100 ಗಿಡ ನೆಡುವ ಯೋಜನೆಯನ್ನು ಹಾಕಿದೆ. ಬಂದರು ವಾರ್ಡ್ನಲ್ಲಿ ಸದ್ಯ ಕಟ್ಟಡಗಳ ಸಂಖ್ಯೆ ಹೆಚ್ಚಿರುವುದರಿಂದ ಗಿಡ ಗಳನ್ನು ನೆಡಲು ಸ್ಥಳಾವಕಾಶದ ಕೊರತೆ ಇದೆ. ನಗರದ ಕೆಲವು ಪ್ರದೇಶಗಳಲ್ಲಿ ಮರ ಗಳ ಸಂಖ್ಯೆ ಹೆಚ್ಚು ಕಾಣುತ್ತದೆ. ಆದರೆ,ಜನಗಳಸಾಂಧ್ರತೆಮತ್ತಷ್ಟುಜಾಸ್ತಿಇದ್ದು,ಸಮತೋಲನವಾಗಿಲ್ಲಎಂದಿದ್ದಾರೆ.ಶೇ.33ರಷ್ಟುಹಸುರುಬೇಕುಯಾವುದೇ ನಗರದಲ್ಲಿ ಕನಿಷ್ಠ ಶೇ. 33ರಷ್ಟು ಮರ ಗಿಡಗಳಿಂದ ಹಸಿರೀಕರಣದಿಂದ ಕೂಡಿರಬೇಕು. ಆದರೆ ನಗರದಲ್ಲಿ ಕೇವಲ ಶೇ. 18ರಷ್ಟು ಮಾತ್ರ ಹಸುರು ತುಂಬಿಕೊಂಡಿದೆ ಇದು ಚಿಂತಿಸಬೇಕಾದ ವಿಚಾರವಾಗಿದೆ.

error: Content is protected !!
Scroll to Top