ಪಿಕಪ್ ಮತ್ತು ಬೈಕ್ ಡಿಕ್ಕಿ ➤ ಬೈಕ್ ಸವಾರರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜೂನ್.24.ರವಿವಾರ ದಂದು ಪೆರುವಾಯಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್‌ ಬೈಕಿಗೆ ಢಿಕ್ಕಿ ಹೊಡೆದು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಪೆರುವಾಯಿ ಜಂಕ್ಷನ್‌ ಕಡೆಯಿಂದ ಮಾಣಿಲಕ್ಕೆ ಹೋಗುತ್ತಿದ್ದ ಪಿಕಪ್‌ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಢಿಕ್ಕಿ ಹೊಡೆದ ಪರಿಣಾಮ ಮುಂದಿನಿಂದ ಬರುತ್ತಿದ್ದ ಬೈಕ್‌ ರಸ್ತೆಯ ಬದಿಯ ಚರಂಡಿಗೆ ಎಸೆಯಲ್ಪಟ್ಟಿದೆ. ಪಿಕಪ್‌ ಸ್ವಲ್ಪ ಮುಂದೆ ಸಾಗಿ ಸೇತುವೆಯ ಕಂಬಕ್ಕೆ ಢಿಕ್ಕಿಯಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಪಿಕಪ್‌ ಚಕ್ರ ಒಡೆದು ಹೋಗಿದೆಯಲ್ಲದೆ, ಮುಂಭಾಗ ಸಂಪೂರ್ಣ ಜಖಂಗೊಂಡಿದೆ.ಶಿಕ್ಷಕ ಅಶೋಕ್‌ ಅವರು ಪೆರುವಾಯಿಯಲ್ಲಿರುವ ಮಾವನ ಮನೆಗೆ ಬಂದಿದ್ದು, ಪೇಟೆಯ ಕಡೆಗೆ ಹೊರಟ ಸಮಯದಲ್ಲಿ ಈ ಘಟನೆ ನಡೆದಿದೆ.

Also Read  ವಿಟ್ಲ: ಎಸ್ಡಿಪಿಐ ಕಛೇರಿಗೆ ಬೆಂಕಿ‌ ಹಚ್ಚಿದ ದುಷ್ಕರ್ಮಿಗಳು

ಪಿಕಪ್‌ ಅನ್ನು ಗಿರೀಶ್‌ ಚಲಾಯಿಸುತ್ತಿದ್ದರೆನ್ನಲಾಗಿದೆ.ಸವಾರ ಪೆರುವಾಯಿ ನಿವಾಸಿ ಕೃಷ್ಣಪ್ಪ ಪೂಜಾರಿ (38) ಮತ್ತು ಸಹ ಸವಾರ ಮಾಂಬಾಡಿ ನಿವಾಸಿ ಕುಡ್ತಮುಗೇರು ಸರಕಾರಿ ಶಾಲಾ ಶಿಕ್ಷಕ ಅಶೋಕ್‌ (32) ಗಾಯಗೊಂಡವರು. ಅವರು ವಿಟ್ಲ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ವಿಟ್ಲದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ಸಂಚಾರ ಸುಗಮಗೊಳಿಸಿದರು.

 

error: Content is protected !!
Scroll to Top