ಬಹಿರಂಗ ಹರಾಜು ಪ್ರಕಟಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಮಂಗಳೂರು ನಗರ ಪೊಲೀಸ್ ಘಟಕಕ್ಕೆ ಸೇರಿದ ಹಳೇಯ ನಾಲ್ಕು ವಾಹನಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡಲು ಜೂನ್ 27 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಬಹಿರಂಗ ಹರಾಜು ಮಾಡುವ ವಾಹನಗಳು – ಕೆ.ಎ. 19 ಜಿ-237 ಮಹೇಂದ್ರ ಕಮಾಂಡರ್ ಮಾದರಿ 2002, ಕೆ.ಎ. 19 ಜಿ-238 ಮಹೇಂದ್ರ ಕಮಾಂಡರ್ ಮಾದರಿ 2002, ಕೆ.ಎ. 19 ಜಿ-220 ಮಹೇಂದ್ರ ಕಮಾಂಡರ್ ಮಾದರಿ 2001, ಕೆ.ಎ. 19 ಜಿ-240 ಮಹೇಂದ್ರ ಕಮಾಂಡರ್ ಮಾದರಿ 2002 .ಆಸಕ್ತರು ಜೂನ್ 26 ರಂದು ಸಂಜೆ 4 ಗಂಟೆಯೊಳಗೆ ಪೊಲೀಸು ಆಯುಕ್ತರು, ಮಂಗಳೂರು ನಗರ, ಮಂಗಳೂರುರವರ ಹೆಸರಿನಲ್ಲಿ ಕಚೇರಿಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಟೆಂಡರ್‍ಗಳನ್ನು ತಿರಸ್ಕರಿಸಲಾಗುವುದು ಎಂದು ಪೊಲೀಸ್ ಆಯುಕ್ತರ ಕಚೇರಿ ಮಂಗಳೂರು ನಗರ ಇವರ ಪ್ರಕಟಣೆ ತಿಳಿಸಿದೆ.

Also Read  ವಿಟ್ಲ: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ➤‌ ಓರ್ವನಿಗೆ ಗಾಯ

error: Content is protected !!
Scroll to Top