ವಿದ್ಯಾರ್ಥಿ ಪಾಸುಗಳ ದರ ನಿಗಧಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ವತಿಯಿಂದ 2019-20ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸುಗಳನ್ನು ಜೂನ್ 19 ರಿಂದ ವಿತರಿಸಲಾಗುತ್ತಿದೆ. ಹಾಗೂ 2018-19ನೇ ಸಾಲಿನ ಪಾಸುಗಳ ದರಪಟ್ಟಿಯೇ, ಪ್ರಸಕ್ತ ವರ್ಷ 2019-20 ಕ್ಕೆ ಅನ್ವಯಿಸಲಾಗುವುದು.

ಬಸ್ ಪಾಸುಗಳ ದರಗಳು – ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) ರೂ. 150/- (ಎಸ್.ಸಿ/ಎಸ್.ಟಿ) ರೂ. 150/-, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) ರೂ. 750/- (ಎಸ್.ಸಿ/ಎಸ್.ಟಿ) ರೂ. 150/-, ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ (ಸಾಮಾನ್ಯ) ರೂ. 550/- (ಎಸ್.ಸಿ/ಎಸ್.ಟಿ) ರೂ. 150/-, ಪಿ.ಯು.ಸಿ., ಡಿಗ್ರಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) ರೂ. 1050/- (ಎಸ್.ಸಿ/ಎಸ್.ಟಿ) ರೂ. 150/-

Also Read   ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಬಿಡುಗಡೆ ಮಾಡಿದ್ದ ₹55 ಕೋಟಿ ದುರ್ಬಳಕೆ.!  

ವೃತಿಪರ ಕೋರ್ಸು ವಿದ್ಯಾರ್ಥಿಗಳಿಗೆ10 ತಿಂಗಳಿಗೆ (ಸಾಮಾನ್ಯ) ರೂ. 1550/- (ಎಸ್.ಸಿ/ಎಸ್.ಟಿ) ರೂ. 150/-, ಸಂಧ್ಯಾ ಕಾಲೇಜು/ಪಿಹೆಚ್‍ಡಿ 10 ತಿಂಗಳಿಗೆ (ಸಾಮಾನ್ಯ) ರೂ. 1350/- (ಎಸ್.ಸಿ/ಎಸ್.ಟಿ) ರೂ. 150/-, ಐ.ಟಿ.ಐ ವಿದ್ಯಾರ್ಥಿಗಳಿಗೆ 12 ತಿಂಗಳಿಗೆ (ಸಾಮಾನ್ಯ) ರೂ. 1310/- (ಎಸ್.ಸಿ/ಎಸ್.ಟಿ) ರೂ. 160/- ನಿಗದಿಪಡಿಸಲಾಗಿದೆ.ವಿದ್ಯಾರ್ಥಿಗಳು ಅಪ್ಲಿಕೋಶನ್ ಫಾರ್ಮ ಅನ್ನು ಆನ್‍ಲೈನ್ ಮೂಲಕ ಕೆ.ಎಸ್.ಆರ್.ಟಿ.ಸಿ ವೆಬ್‍ಸೈಟ್ www.ksrtc.in ಡೌನ್‍ಲೋಡ್ ಮಾಡಿಕೊಂಡು ಶಾಲಾ/ ಕಾಲೇಜು ಮುಖ್ಯಸ್ಥರಲ್ಲಿ ಧೃಡೀಕರಿಸಿ ಪಾಸುಗಳನ್ನು ಪಡೆಯಬಹುದಾಗಿದೆ. ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ನಿಗಮ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top