(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ನಗರದ ಕೃಷಿ ವಿಜ್ಞಾನ ಕೇಂದ್ರ, ಮೀನುಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ದೈಹಿಕ ಶಿಕ್ಷಣ ವಿಭಾಗಗಳು ಮಂಗಳೂರಿನ ಶ್ರೀ ಸಹರಾ ಪ್ರಕೃತಿ ಚಿಕಿತ್ಸಾ ಕೇಂದ್ರದ ಜಂಟಿ ಆಶ್ರಯದಲ್ಲಿ ವಿಶ್ವ ಯೋಗಾ ದಿನಾಚರಣೆಯನ್ನು ಆಚರಿಸಿಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯೋಗಭ್ಯಾಸವು ಪ್ರಾಚೀನ ಕಾಲದಿಂದಲೂ ಪ್ರಚಲಿತವಾದುದೆಂದು ಹೇಳಿದರು. ಋಷಿಮುನಿಗಳು ಧ್ಯಾನ ಮಾಡುವಾಗ ಯೋಗದಿಂದ ಮುಕ್ತಿ ಸಿಗುವುದೆಂದು ಅನಾದಿಕಾಲದಿಂದಲೂ ಅಭ್ಯಸಿಸುತ್ತಿರುವುದನ್ನು ಪ್ರಸ್ಥಾಪಿಸಿದರು. ಈ ದಿನದ ಅಂಗವಾಗಿ ಕೇಂದ್ರದಲ್ಲಿ ವಿಜ್ಞಾನಿಗಳಿಗೆ, ತಾಂತ್ರಿಕ ಮತ್ತು ಭೋದಕೇತರ ಸಿಬ್ಬಂದಿ ಶಿಭಿರಾರ್ಥಿಗಳಿಗೆ ಯೋಗದಿಂದ ಸಿಗುವ ಮಹತ್ವಗಳನ್ನು ಭೋದಿಸಿದರು. ಇದು 5ನೇ ವಿಶ್ವ ಯೋಗಾ ದಿನಾಚರಣೆಯಾಗಿದ್ದು, ಇದರ ಅಂಗವಾಗಿ ಪ್ರಪಂಚದಾದ್ಯಂತ ವಿಭಿನ್ನ ರೀತಿಯಲ್ಲಿ ನಡೆಸಲಾಗುವ ದ್ಯಾನ, ಚರ್ಚಾಸ್ಪರ್ಧೆ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳ ಮೂಲಕ ಆಚರಿಸಲಾಗುವುದೆಂದು ವಿವರಿಸಿದರು.
ಪ್ರಾಚೀನ ಕಾಲದಿಂದ ಪ್ರಾರಂಭವಾದ ಯೋಗವು ಮೂಲತಹ ಭಾರತದಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದಿನಿಂದಲೇ ರೂಢಿಯಲ್ಲಿರುವುದೆಂಬುದನ್ನು ಹೇಳಿದರು. ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2014ನೇ ಸೆಪ್ಟೆಂಬರ 27ರಂದು ಇಡೀ ವಿಶ್ವಕ್ಕೆ ಯೋಗವನ್ನು ಪ್ರಪಂಚಾದ್ಯಂತ ಆಚರಿಸಲು ಕರೆನೀಡಿರುವುದನ್ನು ಸ್ಮರಿಸಿದರು. ಯುನೆಯಿಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ ಸಾರಿರುವ ವಿಶ್ವ ಯೋಗಾ ದಿನಚರಣೆಯನ್ನು ಮಹತ್ವವನ್ನು ವಿವರಿಸಿದರು.ಯೋಗದಿಂದ ಸಿಗುವ ಪರಿಣಾಮಗಳು ಅಪಾರವಾದುದು ಮತ್ತು ಪ್ರತಿನಿತ್ಯ ನಮ್ಮ ದಿನನಿತ್ಯ ಕಾರ್ಯದ ಜೊತೆ ಯೋಗಾಭ್ಯಾಸವನ್ನು ಒಂದು ಹವ್ಯಾಸವನ್ನಾಗಿ ಅಳವಡಿಸಿಕೊಂಡರೆ ಆರೋಗ್ಯ ಸುಧಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಲ್ಲದೇ ಇದೊಂದು ಮನುಷ್ಯನಿಗೆ ಉಚಿತ ಚಿಕಿತ್ಸೆ ಎಂಬ ಅಬಿಪ್ರಾಯ ವ್ಯಕ್ತಪಡಿಸಿದರು.
ಯೋಗದ ವಿವಿಧ ಭಂಗಿಗಳನ್ನು ಮಾಡಿದರೆ ಸಕ್ಕರೆ ಖಾಯಿಲೆ ನಿವಾರಣೆ, ರಕ್ತದೊತ್ತಡ, ಅಸ್ತಮ, ಮೂರ್ಛೆರೋಗ, ಬೆನ್ನು ನೋವು, ಸೊಂಟ ನೋವು, ಮೊಣಕಾಲು, ಗಂಟುನೋವಿಗಾಗಿ ಥೆರಪಟಿಕ್ ಯೋಗಾಸನಾಭ್ಯಾಸ ಇತ್ಯಾದಿಗಳ ಅನುಕೂಲವಾಗುವುದೆಂದು ತಿಳಿಸಿದರು.ಏಕಾಗ್ರತೆ ಮತ್ತು ಜ್ಞಾನ ಶಕ್ತಿಯ ವೃದ್ಧಿಗಾಗಿ ಯೋಗಾಬ್ಯಾಸವನ್ನು ಪ್ರತಿನಿತ್ಯ ಅಭ್ಯಸಿಸಿದರೆ ಬುದ್ದಿವೃದ್ದಿಯಾಗುವುದಲ್ಲದೇ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು. ಕೇಂದ್ರದ ಸಿಬ್ಬಂದಿವರ್ಗದವರಾದ ಹರೀಶ್ ಶಣೈ, ಸತೀಶ್ ನಾಯ್ಕ ಕೆ., ಸೌಮ್ಯ ಕೆ. ಧನಂಜಯ, ಯಶಶ್ರೀ, ದೀಪಾ, ಸೀತರಾಮ, ಸೋಮಶೇಖರಯ್ಯ, ಅಶ್ವಿತ್‍ಕುಮಾರ್, ವಿಧ್ಯಾಶ್ರೀ, ಆಶಾಲತಾ, ವಿನೋದಾ, ಸದಾಶಿವ, ದಾಮೋಧರ ಮುಂತಾದವರು ಯೊಗಭ್ಯಾಸದಲ್ಲಿ ಪಾಲ್ಗೊಂಡಿದ್ದರು.