ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಪ್ರವಾಸೋದ್ಯಮ ಇಲಾಖೆಯಿಂದ 2019-20 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಯೋಜನೆಯಡಿಯಲ್ಲಿನಿರುದ್ಯೋಗಿ ಅಭ್ಯರ್ಥಿಗಳಿಂದ ಉದ್ಯೋಗಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಲಘುವಾಹನ ಚಾಲನಾ ಪರವಾನಗಿ ಹಾಗೂ ಚಾಲಕರ ಬ್ಯಾಡ್ಜ್ ಹೊಂದಿದ್ದು, ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ 20 ರಿಂದ 40 ವರ್ಷ ವಯೋಮಿತಿಯೊಳಗಿರುವ ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಪ್ರವಾಸಿ ವಾಹನಗಳನ್ನು ಖರೀದಿಸಿ ವಿತರಿಸುವ ಸಲುವಾಗಿ ಸಲುವಾಗಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಪ್ರವಾಸಿ ಟ್ಯಾಕ್ಸಿಗಳಿಗೆ ತಗಲುವ ಒಟ್ಟು ವೆಚ್ಚಕ್ಕೆ ಗರಿಷ್ಠ ರೂ. 3 ಲಕ್ಷಗಳನ್ನು ಇಲಾಖೆಯಿಂದ ಸಹಾಯ ಧನ ರೂಪದಲ್ಲಿ ನೀಡಲಾಗುವುದು. ಟ್ಯಾಕ್ಸಿ ಮೊತ್ತದ ಶೇ. 5 ರಷ್ಟು ಅಥವಾ ಆಯ್ಕೆಯ ವಾಹನಕ್ಕೆ ಹೆಚ್ಚುವರಿ ಡೌನ್‍ಪೇಮೆಂಟ್ ಹಣವನ್ನು ಫಲಾನುಭವಿಯಿಂದ ಭರಿಸಿಕೊಂಡು ಉಳಿದ ಮೊತ್ತವನ್ನು ರಾಷ್ಟ್ರೀಕೃತ/ವಾಣಿಜ್ಯ ಬ್ಯಾಂಕ್, ಸಹಕಾರಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಿ ಖರೀದಿಸಿ ವಿತರಿಸಲಾಗುವುದು.

Also Read  ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ ಬೇಗ ಮದುವೆ ಭಾಗ್ಯ ಬಯಸುವವರು ಈ ರೀತಿ ಮಾಡಿದರೆ ಸಾಕು

ಅರ್ಜಿಗಳನ್ನು ಜೂನ್ 20 ರಿಂದ ಜುಲೈ 19 ರಂದು ಸಂಜೆ 5.30 ರ ಒಳಗಾಗಿ ಖುದ್ದಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ಲಾಲ್‍ಬಾಗ್, ಮಂಗಳೂರು ಇವರಿಂದ ಪಡೆದು, ದ್ವಿ-ಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸೀಲು ಮಾಡಿದ ಲಕೋಟೆಯೊಂದಿಗೆ ನೋಂದಾಯಿತ ಅಂಚೆ ಮೂಲಕ ತಲುಪುವಂತೆ ಅಥವಾ ಖುದ್ದಾಗಿ ಲಕೋಟೆಯನ್ನು ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2453926 ಸಂಪರ್ಕಿಸಲು ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಇವರ ಪ್ರಕಟಣೆ ತಿಳಿಸಿದೆ.

Also Read  ಈ 8 ರಾಶಿಯವರಿಗೆ ಧನಪ್ರಾಪ್ತಿ ಯೋಗ ಕುಟುಂಬ ಕಲಹಗಳು ನಿವಾರಣೆಯಾಗುತ್ತದೆ

error: Content is protected !!
Scroll to Top