ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿವೆ ದ.ಕ,ಹಾಗೂ ಉಡುಪಿ ಜಿಲ್ಲೆಯ ಒಟ್ಟು 11 ಕನ್ನಡ ಶಾಲೆಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 11 ಶಾಲೆಗಳು ಬಾಗಿಲು ಹಾಕಿವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಅನುದಾನಿತ ಹಾಗೂ 2 ಸರ್ಕಾರಿ ಶಾಲೆ, ಉಡುಪಿ ಜಿಲ್ಲೆಯಲ್ಲಿ ಒಟ್ಟು 7 ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಕಣ್ಮುಚ್ಚಿವೆ.

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಏನೆಕಲ್ಲು ಗ್ರಾಮದ ದೇವರಹಳ್ಳಿ ಮತ್ತು ಜಾಲ್ಸೂರು ಗ್ರಾಮದ ಕೆಮನಬಳ್ಳಿ ಸರ್ಕಾರಿ ಶಾಲೆಗಳು, ಬಂಟ್ವಾಳ ಕ್ಷೇತ್ರದ ಶಿರಂಕಲ್ಲು ಅನುದಾನಿತ, ಮಂಗಳೂರು ಉತ್ತರ ಕ್ಷೇತ್ರದ ಧೂಮಾವತಿ ಅನುದಾನಿತ ಶಾಲೆಗಳು ಬಾಗಿಲು ಮುಚ್ಚಿವೆ. ಅಲ್ಲಿನ ಶಿಕ್ಷಕರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ.ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಶಾಲೆಗಳು ಮುಚ್ಚುಗಡೆಯಾಗಿದ್ದವು. ಈ ಹಿಂದೆ ಮುಚ್ಚುಗಡೆಯಾಗಿದ್ದ ಕೆಮನಬಳ್ಳಿ ಶಾಲೆ ಊರವರ ಪ್ರಯತ್ನದಿಂದ ಆರಂಭಗೊಂಡಿತ್ತು. ಈ ವರ್ಷ ವಿದ್ಯಾರ್ಥಿಗಳ ಕೊರತೆಯಾದ ಕಾರಣ ಮತ್ತೆ ಬಾಗಿಲು ಹಾಕುವಂತಾಗಿದೆ.

1965ರಲ್ಲಿ ಆರಂಭಗೊಂಡ ದೇವರಹಳ್ಳಿ ಶಾಲೆಯಲ್ಲಿ 4 ಹಾಗೂ ಕೆಮನಬಳ್ಳಿಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದುದರಿಂದ ಪೋಷಕರು ಬೇರೆ ಶಾಲೆಗೆ ಕಳುಹಿಸಲು ಪಟ್ಟು ಹಿಡಿದ ಕಾರಣ ಅನಿವಾರ್ಯವಾಗಿ ಶಾಲೆ ಮುಚ್ಚುಗಡೆಯಾಗಿದೆ.ಈ ವರ್ಷ ಶಾಲಾಭಿವೃದ್ಧಿ ಹಾಗೂ ಊರವರ ಪ್ರಯತ್ನದಿಂದ ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆಯಲ್ಲಿ ಶಾಲೆ ಮತ್ತೆ ಆರಂಭಗೊಂಡಿದೆ. ಈ ಶಾಲೆಯಲ್ಲಿ ಎಲ್ಲ ಮೂಲಭೂತ ಸೌಕರ್ಯ ಹೊಂದಿದೆ. ಶಿಕ್ಷಕರನ್ನು ನೇಮಕ ಮಾಡಬೇಕಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ತಿಳಿಸಿದ್ದಾರೆ.ಸರ್ಕಾರ ಆರಂಭಿಸಿರುವ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಬಹುತೇಕ ಕಡೆ ಖಾಸಗಿ ಶಾಲೆಗಳಿಂದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರಿದ್ದಾರೆ.

Also Read  ಕುಮಾರಧಾರೆಯಲ್ಲಿ ನೀರಿನ ಮಟ್ಟ ಹೆಚ್ಚಳ ➤ ಸ್ನಾನಘಟ್ಟ ಜಲಾವೃತ

ಸರ್ಕಾರ ಆರಂಭಗೊಳಿಸಿದ ಬಹುತೇಕ ಆಂಗ್ಲ ಮಾಧ್ಯಮ ಶಾಲೆಗಳಿಗೆ ನಿಗದಿತ ಸಂಖ್ಯೆಗಿಂತ ಅಧಿಕವಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಜಾಗತಿಕ ವ್ಯವಸ್ಥೆಯಲ್ಲಿ ಆಂಗ್ಲ ಮಾಧ್ಯಮ ಅನಿವಾರ್ಯತೆಯಾಗಿದ್ದು, ಇದರಿಂದ ಬಡವರು ಕೂಡಾ ತಮ್ಮ ಮಕ್ಕಳನ್ನು ಸಾಲ ಮಾಡಿಯಾದರೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಶಿಕ್ಷರನ್ನು ಸಮೀಪದ ಶಾಲೆಗೆ ನಿಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಸರ್ಕಾರಿ ಶಾಲೆ ಹಾಗೂ ಒಂದು ಅನುದಾನಿತ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುಗಡೆಯಾಗಿವೆ. ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುಗಡೆಯಾದ ಶಾಲೆಗಳ ಒಟ್ಟು ಸಂಖ್ಯೆ ಇನ್ನಷ್ಟೇ ಸಿಗಬೇಕಾಗಿದೆ. ಜೂನ್ ಅಂತ್ಯದ ತನಕ ದಾಖಲಾತಿಗೆ ಅವಕಾಶವಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ವರ್ಷದಿಂದ ವರ್ಷಕ್ಕೆ ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಲೇ ಇವೆ.

Also Read  ನೆರೆಮನೆಯ ಮಹಿಳೆಯ ಸ್ನಾನದ ವಿಡಿಯೋ ಚಿತ್ರೀಕರಣ - ಆರೋಪಿ ಅರೆಸ್ಟ್

 

 

error: Content is protected !!
Scroll to Top