ಪುತ್ತೂರು ಕೃಷಿ ಇಲಾಖಾವತಿಯಿಂದ ದರಪಟ್ಟಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಮಂಗಳೂರು ಜೂನ್ 20 (ಕರ್ನಾಟಕ ವಾರ್ತೆ);- ಉಪ ಕೃಷಿ ನಿರ್ದೇಶಕರು-II, ಪುತ್ತೂರು ಈ ಕಚೇರಿಗೆ 2019-20 ನೇ ಸಾಲಿಗೆ ಅಧಿಕೃತ ಸರಕಾರಿ ಕೆಲಸಕ್ಕಾಗಿ ಗುತ್ತಿಗೆ ಆಧಾರದಲ್ಲಿ ಹವಾ ನಿಯಂತ್ರಿತ ಟಾಟಾ ಇಂಡಿಕಾ/ಬೊಲೆರೋ/ ಮಹೇಂದ್ರ ಲೋಗನ್ ಸೇವೆಯನ್ನು ಚಾಲಕರ ಸಮೇತ ಬಾಡಿಗೆಗೆ ಪಡೆಯಲು ದರಪಟ್ಟಿ ಆಹ್ವಾನಿಸಲಾಗಿದೆ.

ಅರ್ಹ ವಾಹನ ಮಾಲಕರು ಭರ್ತಿ ಮಾಡಿದ ಮೊಹರಾದ ಕೊಟೇಶನ್‍ಗಳನ್ನು ಖುದ್ದಾಗಿ/ ಅಂಚೆ ಮೂಲಕ ಉಪ ಕೃಷಿ ನಿರ್ದೇಶಕರು- II, ಜೆ.ವಿ. ಕಟ್ಟಡ, ಡೋರ್ ನಂ. 21-2-14 ಬಿ/ಎ-1-1, 1ನೇ ಮಹಡಿ, ಎ.ಪಿ.ಎ.ಸಿ ರಸ್ತೆ ಪುತ್ತೂರು ದ.ಕ ಜಿಲ್ಲೆ. ಪಿನ್ ಕೋಡ್:574201. ಇವರಿಗೆ ಕಚೇರಿಗೆ ಜುಲೈ 3 ರಂದು ಸಂಜೆ 5.30 ಗಂಟೆಯೊಳಗೆ ಕವರಿನಲ್ಲಿ ಇರಿಸಿ ಲಕೋಟೆಯಲ್ಲಿ ಹಾಕಿ ವಾಕ್ಸ್ ಸೀಲ್ ಮಾಡಿ ಸಲ್ಲಿಸಬೇಕು ಎಂದು ಉಪ ಕೃಷಿ ನಿರ್ದೇಶಕರು-II ಪುತ್ತೂರು ಇವರ ಪ್ರಕಟಣೆ ತಿಳಿಸಿದೆ.

Also Read  ಭದ್ರತಾ ಮಂಡಳಿ ಕಾಯಂ ಸದಸ್ಯತ್ವ:ಭಾರತಕ್ಕೆ ಬ್ರಿಟನ್, ಫ್ರಾನ್ಸ್ ನಿಂದ ಬೆಂಬಲ

error: Content is protected !!
Scroll to Top