(ನ್ಯೂಸ್ ಕಡಬ) newskadaba.com ಬೇತಮಂಗಲ,ಜೂನ್.20. ರೈತರಿಗೆ ಸಮಗ್ರ ಮಾಹಿತಿ ಒದಗಿಸುವ ಪ್ರಚಾರ ವಾಹನಕ್ಕೆ ಗ್ರಾಮದ ರೈತ ಸಂಪರ್ಕ ಕೇಂದ್ರ ಬಳಿ ಹಸಿರು ನಿಶಾನೆ ತೋರಿ ಮಾತನಾಡಿದ ಶಾಸಕಿ ಎಂ.ರೂಪಕಲಾ ರೈತರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಕೃಷಿ ಅಭಿಯಾನ ಸಹಕಾರಿಯಾಗಿದೆ ಎಂದು ನುಡಿದರು.
ರೈತರು ಇಲಾಖೆಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಜತೆಗೆ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಈ ಅಭಿಯಾನ 6 ದಿನಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯಲಿದೆ. ಇದರೊಂದಿಗೆ ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕರಪತ್ರಗಳನ್ನು ಶಾಸಕಿ ರೂಪಕಲಾ ಬಿಡುಗಡೆ ಮಾಡಿದರು.
ಜಿಪಂ ಸದಸ್ಯೆ ನಿರ್ಮಲಾ, ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಗ್ರಾಪಂ ಅಧ್ಯಕ್ಷ ಕಿರಣ್‌ಕುಮಾರ್, ಗ್ರಾಪಂ ಸದಸ್ಯರಾದ ಮಂಜುನಾಥ್, ವಿನುಕಾರ್ತಿಕ್, ತಾಪಂ ಸದಸ್ಯ ನಾರಾಯಣಪ್ಪ, ತಹಶೀಲ್ದಾರ್ ರಮೇಶ್, ಉಪತಹಶೀಲ್ದಾರ್, ಕೃಷಿ ನಿರ್ದೇಶಕ ನಾಗರಾಜ್, ವಸಂತರೆಡ್ಡಿ, ಸಂಪತ್, ನಿವೃತ್ತ ಕೃಷಿ ಅಧಿಕಾರಿ ಸೋಮಸುಂದರ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ್, ತೋಟಗಾರಿಕೆ ಅಧಿಕಾರಿ ರಾಮೂರ್ತಿ, ರೇಷ್ಮೆ ಶ್ರೀನಿವಾಸ್, ಎಚ್ಸಿಒ ಶ್ರೀನಿವಾಸ್, ಮುಖಂಡರಾದ ರಾಧಾಕೃಷ್ಣರೆಡ್ಡಿ, ಪದ್ಮನಾಭರೆಡ್ಡಿ, ರೈತರು, ಮುಖಂಡರು ಉಪಸ್ಥಿತರಿದ್ದರು.