ನೂಜಿಬಾಳ್ತಿಲ: ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವು

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.20.ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆಯವರು ತೆರವು ಗೊಳಿಸಿದ್ದಾರೆ.


ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪದ ಗರ್ಗಸ್‍ಪಾಲ್ ತಿರುವಿನ ಹೆದ್ದಾರಿ ಅಂಚಿನಲ್ಲಿಯೇ ಅಪಾಯಕಾರಿ ಬೃಹತ್ ಗಾತ್ರದ ಮರಗಳಿತ್ತು, ಇದು ಹೆದ್ದಾರಿ ತಿರುವಿನ ರಸ್ತೆ ಬದಿಯಲ್ಲಿರುವುದರಿಂದ ವಾಹನ ಸವಾರರಿಗೂ ಅಪಾಯಕಾರಿಯಾಗಿ ಹಾಗೂ ಮಳೆಗಾಲದ ಗಾಳಿಗೆ ಹೆದ್ದಾರಿಗೆ ಮುರಿದು ಬೀಳುವ ಜೊತೆಗೆ ಜೀವಹಾನಿಯ ಆತಂಕವನ್ನು ಈ ಭಾಗದ ಗ್ರಾಮಸ್ಥರು ವ್ಯಕ್ತಪಡಿಸಿ ತೆರವಿಗೆ ಆಗ್ರಹಿಸಿದ್ದರು. ಇದೀಗ ಮರವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದಾರೆ.

Also Read  ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶ


ಎ.ಸಿ. ಸೂಚನೆ;
ಹೆದ್ದಾರಿ ಬದಿಯ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ನೂಜಿಬಾಳ್ತಿಲ ಗ್ರಾಮಸಭೆಯಲ್ಲಿಯೂ ಗ್ರಾಮಸ್ಥರು ಅರಣ್ಯ ಇಲಾಖೆಯಲ್ಲಿ ಆಗ್ರಹಿಸಿದ್ದರು. ಅಲ್ಲದೆ, ಕಡಬಕ್ಕೆ ಬೇಟಿ ನೀಡಿದ್ದ ಪುತ್ತೂರು ಸಹಾಯಕ ಕಮೀಷನರ್ ಎಚ್.ಕೆ. ಕೃಷ್ಣಮೂರ್ತಿಯವರು ಕೂಡ ಕೂಡಲೇ ಮರ ತೆರವಿಗೆ ಕ್ರಮಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದ್ದರು. ಈ ಮರ ತೆರವುಗೊಳಿಸುವಂತೆ ಮಾದ್ಯಮದಲ್ಲಿಯೂ ವರದಿಗಳು ಪ್ರಸಾರಗೊಂಡಿತ್ತು. ಇದೀಗ ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿ ಸಂಚಾರ ನಿರಾತಂಕಗೊಳ್ಳುವಂತೆ ಮಾಡಿದ್ದಾರೆ.

error: Content is protected !!
Scroll to Top