ಪದವಿ ಪರೀಕ್ಷೆಗಳ ಫಲಿತಾಂಶ ವೈಯಕ್ತಿಕ ವೀಕ್ಷಣೆಗೆ ಅರ್ಜಿ ಸಲ್ಲಿಸಲು ➤ ಜೂನ್ 29 ಕಡೆಯ ದಿನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.20.ಮಂಗಳೂರು ವಿಶ್ವವಿದ್ಯಾನಿಲಯದ ಎಪ್ರಿಲ್/ಮೇ 2019ರಲ್ಲಿ ನಡೆದ ಎಲ್ಲಾ ಪದವಿ ಪರೀಕ್ಷೆಗಳ ಫಲಿತಾಂಶಗಳನ್ನು ಜೂನ್ 18 ರಂದು ಅಪರಾಹ್ನದಿಂದ ವಿಶ್ವವಿದ್ಯಾನಿಲಯದ ಅಧೀಕೃತ ವೆಬ್‍ಸೈಟ್‍ನಲ್ಲಿ (www.mangaloreuniversity.ac.in) ಪ್ರಕಟಿಸಲಾಗಿದೆ.

ಮರುಮೌಲ್ಯಮಾಪನ/ ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಅರ್ಜಿಯನ್ನು ಜೂನ್ 29 ರೊಳಗೆ ಫಲಿತಾಂಶದ ವೆಬ್‍ಸೈಟ್ ಪ್ರತಿಯೊಂದಿಗೆ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group