ಅಂತರಾಷ್ಟ್ರೀಯ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.20.ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ಮತ್ತು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಾಗುವುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ. ರಾಮಕೃಷ್ಣ ರಾವ್, ಇವರು ಉದ್ಘಾಟಿಸಲಿದ್ದು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಶಾಖಾ ಚೆಯರ್‍ಮೆನ್ ಸಿಎ. ಶಾಂತಾರಾಮ್ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿರುತ್ತಾರೆ. ಡಾ| ಮೊಹಮ್ಮದ್ ಇಕ್ಬಾಲ್, ಡಾ| ದೇವರಾಜ್, ಶಿವಾನಂದ ಮೊೈಲಿ, ಅಶೋಕ ಮೊೈಲಿ, ಗೀತಾ ಕಲ್ಯಾಣಪುರ ಇವರು ಅತಿಥಿಗಳಾಗಿ ಉಪಸ್ಥಿತರಿರುವರು.

Also Read  ನೇತ್ರಾವತಿ: ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ

ಪತಂಜಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ| ಜಗದೀಶ್ ಶೆಟ್ಟಿ, ಬಿಜೈ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವು ಮಣ್ಣಗುಡ್ಡೆಯಲ್ಲಿರುವ ದೇವಾಡಿಗ ಸಮಾಜ ಭವನದಲ್ಲಿ ಜೂನ್ 21 ರಂದು ಸಂಜೆ 5.30 ರಿಂದ 7-30 ಗಂಟೆವರೆಗೆ ಜರುಗಲಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಉಪಯೋಗಿಸಿಕೊಂಡು ಅಂತರಾಷ್ಟ್ರೀಯ ಯೋಗ ದಿನದ ಪ್ರಾಮುಖ್ಯತೆಯ ಅರಿವನ್ನು ಜನರಿಗೆ ಮುಟ್ಟಿಸಬೇಕಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಚೇರ್‍ಮೆನ್ ಸಿಎ. ಶಾಂತರಾಮ್ ಶೆಟ್ಟಿಯವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top