ವಿವಿ ಕಾಲೇಜಿನಲ್ಲಿ ಇತಿಹಾಸ ಮತ್ತು ಪುರಾತತ್ವ ಎಂ.ಎ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.20.ಮಂಗಳೂರು ವಿಶ್ವವಿದ್ಯಾನಿಲಯ ಪ್ರಸ್ತುತ ವರ್ಷದಿಂದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಎಂ.ಎ ಪದವಿ ಆರಂಭಿಸಿದೆ. ದೇಶದ ಕೆಲವೇ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಇತಿಹಾಸ ಅಧ್ಯಯನದ ಜೊತೆಗೆ ಉದ್ಯೋಗಕ್ಕೆ ಪೂರಕವಾಗಿರುವ ಪುರಾತತ್ವ ವಿಷಯವನ್ನು ಬೋಧಿಸಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಪುರಾತತ್ವ ಶಾಸ್ತ್ರವು ಒಂದು ವೈಜ್ಞಾನಿಕ ವಿಷಯವಾಗಿ ಬೆಳೆಯುತ್ತಿದೆ. ಇದರ ಮೂಲ ಉದ್ದೇಶ ಮಾನವನ ವಿಕಾಸ ಕ್ರಮದಲ್ಲಿ ಅವನ ಸಾಧನೆಗಳ ಏರಿಳಿತಗಳು, ಅವುಗಳ ಕಾರಣ, ಪರಿಣಾಮಗಳನ್ನು ಅಧ್ಯಯನ ಮಾಡುವುದಾಗಿದೆ, ಈ ರೀತಿ ಮಾನವ ಸಂಸ್ಕೃತಿಯ ಉತ್ಪತ್ತಿ ಮತ್ತು ವಿಕಾಸಗಳಲ್ಲಿ ಪರಿಸರದ ಪಾತ್ರ ಹಾಗೂ ಪರಿಸರದಲ್ಲುಂಟಾದ ಬದಲಾವಣೆಗಳು ಈ ಅಧ್ಯಯನ ವ್ಯಾಪ್ತಿಯಲ್ಲಿ ಬರುತ್ತವೆ.

Also Read  ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಹಾವಿನಿಂದ ಕಚ್ಚಿಸಿಕೊಂಡು ಯುವಕ ಮೃತ್ಯು

ಪ್ರವಾಸೋದ್ಯಮ ಬೆಳೆಯುತ್ತಿರುವ ಕರಾವಳಿಯಲ್ಲಿ ಇತಿಹಾಸ ಮತ್ತು ಪುರಾತತ್ವಕ್ಕೆ ಸಂಬಂಧಿಸಿದ ಕೆಲಸಗಳಿಗೆ, ಸಂಶೋಧನೆಗೆ ಅವಕಾಶವಿದೆ. ಇತಿಹಾಸದ ವಿವಿಧ ವಿಭಾಗಗಳಲ್ಲಿ ಪಾಂಡಿತ್ಯ ಗಳಿಸಿರುವ ಪ್ರಾಧ್ಯಾಪಕರು ಮತ್ತು ಸಂಶೋಧನಾ ಗ್ರಂಥಗಳಿರುವ ಅತ್ಯುತ್ತಮ ಗ್ರಂಥಾಲಯವಿದೆ. ಎಲ್ಲದಕ್ಕಿಂತ ಮಿಗಿಲಾಗಿ ಭಾರತೀಯ ಪುರಾತನ ಸರ್ವೇಕ್ಷಣಾ ಇಲಾಖೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು, ಕೆಪಿಎಸ್ಸಿ ಮತ್ತು ಯುಪಿಎಸ್ಸಿ, ಸಂಶೋಧನಾ ಸಂಸ್ಥೆಗಳು, ಪ್ರವಾಸ ಮಾರ್ಗದರ್ಶಕ ಹೀಗೆ ಹೇರಳ ಉದ್ಯೋಗಾವಕಾಶಗಳು ಪದವಿಯನ್ನು ಆಕರ್ಷಕವನ್ನಾಗಿಸಿವೆ.ಆಸಕ್ತರು ವಿವಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ದೂರವಾಣಿ ಸಂಖ್ಯೆ- 0824-2424760, 9480448721, 9480016243. ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಬೈಕ್ ಮತ್ತು ಸ್ಕೂಟರ್ ನಡುವೆ ಢಿಕ್ಕಿ

error: Content is protected !!
Scroll to Top