(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜೂನ್.19.ಪರಿಸರ ಮಾಲಿನ್ಯ ತಗ್ಗಿಸುವ ದೃಷ್ಟಿಯಿಂದ 2030ರ ನಂತರ ದೇಶಾದ್ಯಂತ ಕೇವಲ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನಗಳನ್ನೇ ಮಾರಾಟ ಮಾಡಬೇಕು ಎಂಬ ನಿಯಮ ಜಾರಿಗೆ ತರಲು ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈಗಾಗಲೇ 2025ರಿಂದ 150 ಸಿಸಿ ಸಾಮರ್ಥ್ಯದ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಬೇಕು ಎಂದು ಶಿಫಾರಸನ್ನು ನೀತಿ ಆಯೋಗ ಮಾಡಿದೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವುದರಿಂದ ದೇಶದ ತೈಲ ಬೇಡಿಕೆ ಶೇ. 64ರಷ್ಟು ಕಡಿಮೆ ಆಗುತ್ತದೆ. ಜತೆಗೆ ಶೇ. 37ರಷ್ಟು ಇಂಗಾಲ ಹೊರಸೂಸುವಿಕೆ ತಡೆಗಟ್ಟಬಹುದಾಗಿದೆ. ಭಾರತದಲ್ಲಿ ಪ್ರತಿ ದಿನ ಎಲ್ಲ ರೀತಿಯ ಸುಮಾರು 50 ಸಾವಿರ ವಾಹನಗಳು ನೋಂದಣಿಯಾಗುತ್ತವೆ. ಕಳೆದ ದಶಕದಿಂದ ಪ್ರತಿ ವರ್ಷ ಈ ಸಂಖ್ಯೆ ಶೇ.10 ಏರುತ್ತಿದೆ. ಸದ್ಯ 4 ಲಕ್ಷ ವಿದ್ಯುತ್ ಚಾಲಿತ ಬೈಕ್ಗಳು ಹಾಗೂ ಸುಮಾರು 5 ಸಾವಿರ ವಿದ್ಯುತ್ ಚಾಲಿತ ಕಾರುಗಳು. ಜತೆಗೆ ದೇಶದ ಆಯ್ದ ಹೆದ್ದಾರಿಗಳಲ್ಲಿ ಟ್ರಕ್ ಹಾಗೂ ಬಸ್ಗಳನ್ನೂ ಎಲೆಕ್ಟ್ರಿಕ್ ವಾಹನಗಳಾಗಿ ಮಾರ್ಪಡಿಸಿ ಸಂಚರಿಸಲು ಇ–ಹೆದ್ದಾರಿ ಪಥ ನಿರ್ವಿುಸುವ ಹಾಗೂ ಇ–ಹೆದ್ದಾರಿ ಗಳಾಗಿ ವಿಸ್ತರಿಸಬಹುದಾದ ಮಾರ್ಗಗಳ ಬಗ್ಗೆ ವರದಿ ಕೇಳಿದೆ.