ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ಕರ್ನಾಟಕ ಜಾನಪದ ಅಕಾಡೆಮಿಯು ದಿನಾಂಕ: 01-01-2018ರಿಂದ 31-12-2018ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣ ಗೊಂಡಿರುವ ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಂತೆ ಮಿತಿಯಲ್ಲಿರುವ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ, ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಲೇಖಕರು/ಪ್ರಕಾಶಕರು/ಸಂಪಾದಕರು 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560002 ಇವರಿಗೆ ಜುಲೈ 15 ರೊಳಗೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿ ಕೊಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ರಾಜೇಶ್.ಜಿ. ಇವರ ಪ್ರಕಟಣೆ ತಿಳಿಸಿದೆ.

Also Read  ಕಚ್ಚಿದ ಹೆಬ್ಬಾವು ಜೊತೆ ಉಡುಪಿಯ ಆಸ್ಪತ್ರೆಗೆ ಬಂದು ದಾಖಲಾದ ► ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್!

error: Content is protected !!
Scroll to Top