ಪಾಲಿಟೆಕ್ನಿಕ್ – ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ಕರ್ನಾಟಕ ಪಾಲಿಟೆಕ್ನಿಕ್, ಮಂಗಳೂರು ಈ ಸಂಸ್ಥೆಗೆ ಸಂಬಂಧಿಸಿದಂತೆ 2019-20 ನೇ ಸಾಲಿನಲ್ಲಿ 2 ವರ್ಷಗಳ ಐಟಿಐ/ ದ್ವಿತೀಯ ಪಿಯುಸಿ(ವಿಜ್ಞಾನ)/ ದ್ವಿತೀಯ ಪಿಯುಸಿ(ತಾಂತ್ರಿಕ ವಿಷಯಗಳು) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿಸಲ್ಲಿಸಲು ಅವಕಾಶವಿದೆ.

ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ /3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸುಗಳಿಗೆ ಆನ್‍ಲೈನ್ ಇಂಟರಾಕ್ಟೀವ್ ಕೌನ್ಸೆಲಿಂಗ್ ಮೂಲಕ ಜೂನ್ 19 ರಿಂದ ಜೂನ್ 29 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್www.dte.kar.nic.in ಅಥವಾ ಕಚೇರಿ ದೂರವಾಣಿ ಸಂಖ್ಯೆ: 0824-2211636 ಇಲ್ಲಗೆ ಸಂಪರ್ಕಿಸಬೇಕು ಎಂದು ಪ್ರಿನ್ಸಿಪಾಲ್ ಗ್ರೇಡ್-2 ಕರ್ನಾಟಕ ಪಾಲಿಟೆಕ್ನಿಕ್, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group