ಉಜಿರಡ್ಕ: ಇನ್ನೂ ಈಡೇರದ ಸೇತುವೆಯ ಭರವಸೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂನ್.18. ನಾಲ್ಕೂರು ಗ್ರಾಮದ ಉಜಿರಡ್ಕ ನಿವಾಸಿಗಳು ಮಳೆಗಾಲದಲ್ಲಿ ತಮ್ಮೂರಿನ ಮನೆಗಳಿಗೆ ತೆರಳಬೇಕಾದರೆ ರಸ್ತೆ ಮಧ್ಯೆ ಸಿಗುವ ಹೊಳೆ ದಾಟಬೇಕು.

ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುವುದರಿಂದ ದಾಟಲು ಸಾಧ್ಯವಾಗದೆ ಇಲ್ಲಿನವರು ಸುತ್ತು ಬಳಸಿ ತೆರಳಬೇಕು.ಇಂತಹ ಸಂಕಷ್ಟಗಳ ಸರಮಾಲೆ ಹೊತ್ತು ಮಳೆಗಾಲದ ಅವಧಿ ಕಳೆಯುವವರು ತಮ್ಮೂರಿಗೆ ತೆರಳುವ ರಸ್ತೆ ಮಧ್ಯೆ ಹರಿಯುವ ಹೊಳೆಗೆ ಸೇತುವೆ ನಿರ್ಮಿಸಿ ಕೊಡುವಂತೆ ಅವರು ಬೇಡಿಕೆ ಇರಿಸಿ ದಶಕಗಳೇ ಕಳೆದಿವೆ. ಇದುವರೆಗೆ ಈಡೇರಿಲ್ಲ. ಭರವಸೆಗಳ ಮಹಾಪೂರವೇ ಹರಿದು ಬಂದಿದ್ದರೂ ಅವೆಲ್ಲವೂ ಇಲ್ಲಿ ಹುಸಿಯಾಗಿವೆ.ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯಲ್ಲಿದೆ ಉಜಿರಡ್ಕ ಪ್ರದೇಶ.

ಇಲ್ಲಿ ದಶಕಗಳಿಂದ ಹಲವಾರು ಬಡ ಕುಟುಂಬಗಳು ವಾಸಿಸುತ್ತಿವೆ. ಪರಿಶಿಷ್ಟ ಜಾತಿ ಜತೆ ಇತರ ವರ್ಗದ ಕುಟುಂಬಗಳು ಇಲ್ಲಿವೆ.ಕೂಲಿ ಕೆಲಸವೇ ಇವರಿಗೆ ಜೀವನಾಧಾರ. ದಿನ ನಿತ್ಯದ ವ್ಯಾವಹಾರಿಕ ಚಟುವಟಿಕೆಗಳಿಗೆ ಸಮೀಪದ ಯೇನೆಕಲ್ಲು, ಸುಬ್ರಹ್ಮಣ್ಯಕ್ಕೆ ತೆರಳಲು ಇಲ್ಲಿಯ ನಾಗರಿಕರು ಸೇತುವೆ ಇಲ್ಲದ ಕಾರಣ 1 ಕಿ.ಮೀ. ಸಂಚಾರಕ್ಕೆ ಸುತ್ತು ಬಳಸಿ 20 ಕಿ.ಮೀ. ದೂರವಾಗಿ ತೆರಳಬೇಕು.ನಿವಾಸಿಗಳು ತೆರಳುವ ರಸ್ತೆಗೆ ಅಡ್ಡಲಾಗಿ ಹರಿಯುವ ಕಲ್ಲಾಜೆ ಹೊಳೆ ದಾಟಬೇಕು. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರು ಸಹಿತ ನಾಗರಿಕರು ಇಲ್ಲಿ ಸಂಚಾರದ ವೇಳೆ ನರಕಯಾತನೆ ಅನುಭವಿಸುತ್ತಾರೆ.

Also Read  ಇಂದಿನ ಪ್ರಮುಖ ಸುದ್ದಿಗಳು

ಸ್ಥಳೀಯರು ಸೇರಿಕೊಂಡು ಮಳೆಗಾಲದ ವೇಳೆ ಇಲ್ಲಿ ತಮ್ಮ ಅನುಕೂಲಕ್ಕಾಗಿ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿಕೊಳ್ಳುತ್ತಾರೆ. ಈ ಬಾರಿ ಅದೂ ಆಗಿಲ್ಲ. ಇಲ್ಲಿ ಸೇತುವೆ ನಿರ್ಮಾಣದ ಅಗತ್ಯವಿದೆ.ಸೇತುವೆ ಇಲ್ಲದೆ ಇಲ್ಲಿಯ ನಿವಾಸಿ ಗಳು ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಂಡಿದ್ದರು. ಪ್ರತಿ ಚುನಾವಣೆ ವೇಳೆ ಪಕ್ಷಗಳ ಮುಖಂಡರು ಭರವಸೆ ನೀಡಿದ್ದರು. ಸ್ಥಳೀಯರು ಬೆಂಗಳೂರಿಗೆ ತೆರಳಿ ಶಾಸಕರು, ಸಂಸದರು, ಸಚಿವರ ಭೇಟಿ ಮಾಡಿ ಗಮನಕ್ಕೆತಂದಿದ್ದೇವೆ.ಮುಂದಿನದಿನಗಳಲ್ಲಿ ಅನುದಾನ ಬರಬಹುದೆನ್ನುವ ನಿರೀಕ್ಷೆ ಸ್ಥಳೀಯರದ್ದು.

Also Read  ಥಾಣೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ದಂಪತಿ ಬಂಧನ

 

error: Content is protected !!
Scroll to Top