ವಿಶ್ವ ಪರಿಸರ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.18.ಷಿ ವಿಜ್ಞಾನ ಕೇಂದ್ರದ ವತಿಯಿಂದ ಗೋರಿಗುಡ್ಡದ ಕಿಟೆಲ್ ಮೆಮೋರಿಯಲ್‍ನ ವಿದ್ಯಾಸಂಸ್ಥೆಗಳಾದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಸಹಯೋಗದಿಂದ ಇತ್ತೀಚೆಗೆ ವನಹೋತ್ಸಹವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.


ವಿಶೇಷ ದಿನಗಳಲ್ಲೊಂದಾದ ವಿಶ್ವಪರಿಸರ ದಿನವನ್ನು ಶಾಲೆಯ ಆವರಣದಲ್ಲಿ ನಡೆಸಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮತ್ತು ಪ್ರಧಾನ ವಿಜ್ಞಾನಿ ಡಾ. ಎ.ಟಿ. ರಾಮಚಂದ್ರ ನಾಯ್ಕ ವನಮಹೋತ್ಸವ ಸಮಾರಂಭವನ್ನು ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ 2019ನೇ ಸಾಲಿನ ವಿಶ್ವಪರಿಸರ ದಿನದ ಪ್ರಮುಖ ಶಿರ್ಷಿಕೆಯಾದ ‘ವಾಯುಮಾಲಿನ್ಯ ನಿಂಯಂತ್ರಣ’ ದ ಬಗ್ಗೆ ಮಾತನಾಡಿ ದಕ್ಷಿಣ ಏಷ್ಯಾದ ಕಲುಷಿತ ಒಟ್ಟು 30 ನಗರಗಳ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶಗಳು ಸೇರಿವೆ ಎಂದು ಹೇಳಿದರು. ಇವುಗಳಲ್ಲಿ ಸುಮಾರು 22 ನಗರಗಳು ಭಾರತಕ್ಕೆ ಸೇರಿದವುಗಳು. ಹಾಗೆ ನೋಡಿದರೆ ದಕ್ಷಿಣ ಏಷ್ಯಾದ ವಾಯುಮಾಲಿನ್ಯ ಸೂಚ್ಯಾಂಕದಲ್ಲಿ ಭಾರತದ್ದೇ ಸಿಂಹಪಾಲು ಎಂದು ತಿಳಿಸಿದರು.

Also Read  ಆತ್ಮ ನಿರ್ಭರ ಭಾರತ ಸಂಕಲ್ಪ ➤ ಪಂಜದಲ್ಲಿ ತರಕಾರಿ ಬೀಜ ವಿತರಣೆ

ನಾವು ವಾಸಿಸುವ ಸುತ್ತಮುತ್ತಲಿನ ವಾತಾವರಣ ಹದಗೆಟ್ಟಿದ್ದು, ಜೀವಿಸಲು ಯೋಗ್ಯವಿಲ್ಲ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿಗಳು ಹೇಳುತ್ತಿವೆ. ಹಾಗಾಗಿ, ಹಸಿರು ಮನೆ ತೊಂದರೆ, ಜಾಗತೀಕ ತಾಪಮಾನ ಏರಿಕೆ, ಜೀವವಾಯು ಆಂಮ್ಲಜನಕ ಕೊರತೆ, ಶುದ್ಧ ಕುಡಿಯುವ ನೀರಿನ ಕೊರತೆ, ಮಳೆಯ ಅಭಾವ, ಇತ್ಯಾದಿಗಳು ಮಾನವ ಎದುರಿಸುವ ಸಮಸ್ಯೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕವಾಗಿ ಏರುತ್ತಿರುವ ತಾಪಮಾನ, ಪರಿಸರ ಮಾಲಿನ್ಯ, ಕೈಗಾರಿಕರಣ, ಅರಣ್ಯನಾಶ, ಜಲ (ಸಾಗರ) ಮಾಲಿನ್ಯ, ಇಳಿಮುಖವಾಗುತ್ತಿರುವ ಮಳೆ ಮುಂತಾದ ಪರಿಣಾಮದಿಂದ ಪರಿಸರ ದಿನೇ ದಿನೇ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಜೂನ್ 5ರಂದು ವಿಶ್ವಪರಿಸರ ದಿನವಾಗಿ ಆಚರಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಇದಾಗಿದೆ ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತೀ ವರ್ಷ ವಾಯುಮಾಲಿನ್ಯದಿಂದ ಜಗತ್ತಿನಲ್ಲಿ ಸುಮಾರು 70 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ. ಆದುದರಿಂದ ನಮ್ಮ ಆರೋಗ್ಯ ಮತ್ತು ಸುಖಕರವಾದ ಜೀವನ ನಡೆಸಬೇಕಾದರೆ ಹಾಗೂ ಮುಂದಿನ ಪೀಳಿಗೆಗಳಿಗೆ ಉತ್ತಮ ಆರೋಗ್ಯವಂತ ವಾತಾವರಣ ವರ್ಗಾಯಿಸಬೇಕಾದರೆ ಇಂದಿನಿಂದಲೇ ನಾವೆಲ್ಲರೂ ಪರಿಸರವನ್ನು ಸ್ವಚ್ಚವಾಗಿಡುವಂತಹ ಜವಾಬ್ದಾರಿಯನ್ನು ಹೊತ್ತಿಕೊಳ್ಳುವುದು ಅನಿವಾರ್ಯವಾಗಿದೆಯೆಂದು ಪ್ರಧಾನ ವಿಜ್ಞಾನಿ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಕರೆನೀಡಿದರು.ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹಾಗೂ ಕೃಷಿಯೇತರ ವಿಷಯಗಳ ವಿಜ್ಞಾನಿಗಳಾದ ಹರೀಷ್ ಶಣೈ, ಡಾ. ಚೇತನ್ ಎನ್., ಡಾ. ಕೇದರನಾಥ್, ಡಾ. ನವೀನ್ ಕುಮಾರ ಬಿ.ಟಿ., ಡಾ. ಮಾಲ್ಲಿಕಾರ್ಜುನ, ಡಾ. ರಶ್ಮಿ ಆರ್. ಮತ್ತು ಕ್ಷೇತ್ರ ನಿರ್ವಾಹಕ ಡಾ. ಪುನೀತ್ ರಾಜ್ ರವರು ಉಪಸ್ಥಿತರಿದ್ದರು. ಕೇಂದ್ರದ ಇತರೆ ಸಿಬ್ಬಂದಿಗಳಾದ ಸತೀಶ್‍ನಾಯಕ್, ಸೌಮ್ಯ ಕೆ. ಧನಂಜಯ್ಯ, ಯಶಶ್ರೀ, ಕೇಶವ ಮತ್ತು ಸೋಮಶೇಖರಯ್ಯ ಹಾಜರಿದ್ದರು.

Also Read  ಮಂಗಳೂರು:‌ ವಿಶ್ವ ಪಾರ್ಶ್ವವಾಯು ದಿನದಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ವಿಶೇಷ ಪ್ಯಾಕೇಜ್

error: Content is protected !!
Scroll to Top