(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.18.ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಪ್ರಸಕ್ತ 2019-20 ನೇ ಸಾಲಿಗೆ ಅಡ್ವಾನ್ಸ್ಡ್ ಎಸ್.ಎಂ.ಒ (ಸಿದ್ಧ ಉಡುಪು ತಯಾರಿಕಾ ತರಬೇತಿ) ಪಡೆದು ಉದ್ಯೋಗವಂತರಾಗಲು ದಕ್ಷಿಣಕನ್ನಡ ಜಿಲ್ಲೆಯ ಸಾಮಾನ್ಯ/ಪರಿಶಿಷ್ಟಜಾತಿ/ಪರಿಶಿಷ್ಟಪಂಗಡ/ ಅಲ್ಪಸಂಖ್ಯಾತರು ಅರ್ಹ ಪುರುಷ/ಮಹಿಳಾ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
45 ದಿನಗಳ ಅಡ್ವಾನ್ಸ್ಡ್ ಎಸ್.ಎಂ.ಒ ಸಿದ್ಧ ಉಡುಪು ತಯಾರಿಕಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಂಡ ನಂತರ ಶಿಷ್ಯವೇತನ ರೂ. 3,500/- ಗಳನ್ನು ಪಾವತಿಸಲಾಗುವುದು 18 ರಿಂದ 35 ವರ್ಷದೊಳಗಿನ ಕನಿಷ್ಠ 5 ನೇ ತರಗತಿ ಪಾಸಾದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿಗಳನ್ನು ತಮಗೆ ಹತ್ತಿರದ ಕೌಶಲ್ಯಾಭಿವೃದ್ಧಿ ಕೇಂದ್ರಗಳಿಂದ ಪಡೆದು ಭರ್ತಿ ಮಾಡಿ ಅಲ್ಲಿಯೇ ಸಲ್ಲಿಸಬೇಕು. ಸಂದರ್ಶನದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ತಂಡವಾಗಿ (ಬ್ಯಾಚ್ ಮಾಡಿ) ತರಬೇತಿ ನೀಡಲಾಗುವುದು.
ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಕಮ್ಯುನಿಟಿ ಪಾಲಿಟೆಕ್ನಿಕ್, ಶಾಹಿನ್ ಮಾಲ್, ಬೆಳ್ಳಾರೆ, ದೂರವಾಣಿ ಸಂಖ್ಯೆ- 9741621475, ಶ್ರೀ ದಾಮೋದರ ಗಾರ್ಮೆಂಟ್ಸ್ & ಟ್ರೈನಿಂಗ್ ಸೆಂಟರ್, ಗುರುಪುರ ಗ್ರಾಮ, ಮಂಗಳೂರು ದೂರವಾಣಿ ಸಂಖ್ಯೆ – 8722957339, ಗ್ಲೋರಿಯಾ ಫ್ಯಾಶನ್ ಸೆಂಟರ್, ಗೋಳ್ತಮಜಲು ಗ್ರಾಮ, ಕಲ್ಲಡ್ಕ ಪೋಸ್ಟ್, ಬಂಟ್ವಾಳ ದೂರವಾಣಿ ಸಂಖ್ಯೆ -7022807456, ಎಸ್.ಕೆ.ಡಿ.ಆರ್.ಡಿ.ಪಿ-ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಸಿರಿ ಕಟ್ಟಡ, ಲಾಯಿಲಾ, ಬೆಳ್ತಂಗಡಿ ತಾಲೂಕು ದೂರವಾಣಿ ಸಂಖ್ಯೆ-9731149679, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಕೆ.ಎಂ.ಸಿ. ಆಸ್ಪತ್ರೆ ಎದುರು, ಅತ್ತಾವರ, ದೂರವಾಣಿ ಸಂಖ್ಯೆ – 8951097991 ಈ ಸುಸಜ್ಜಿತ ಕೌಶಲ್ಯಾಭಿವೃದ್ಧಿ ಕೇಂದ್ರಗಳಲ್ಲಿ ತರಬೇತಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಯೆಯ್ಯಾಡಿ, ಮಂಗಳೂರು ದೂರವಾಣಿ ಸಂಖ್ಯೆ: 0824-2225056/9481628584 ಹಾಗೂ ಹತ್ತಿರದ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.