ವಿಟ್ಲ – ಅಂಗನವಾಡಿಗಳಿಗೆ ನೇಮಕಾತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.18.ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 2 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 9 ಅಂಗನವಾಡಿ ಸಹಾಯಕಿರ ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಜೂನ್ 15 ರಿಂದ ಆನ್‍ಲೈನ್ ಮೂಲಕ ವೆಬ್‍ಸೈಟ್: www.anganwadirecruit.kar.nic.in ರಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಪೆರಾಜೆ ಗ್ರಾಮ ಪಂಚಾಯತ್‍ನ ಮಡಲ ಅಂಗನವಾಡಿ, ಪುಣಚ ಗ್ರಾಮದ ಮೂಡಾಯಿಬೆಟ್ಟು ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ 2 ಹುದ್ದೆ ಖಾಲಿ ಇರುತ್ತದೆ.ಅನಂತಾಡಿ ಗ್ರಾಮ ಪಂಚಾಯತ್‍ನ ಗೋಳಿಕಟ್ಟೆ ಅಂಗನವಾಡಿ, ಇಡ್ಕಿದು ಗ್ರಾಮ ಪಂಚಾಯತ್‍ನ ಓಜಾಲ ಅಂಗನವಾಡಿ, ಕರೋಪಾಡಿ ಗ್ರಾಮಪಂಚಾಯತ್‍ನ ಪಲ್ಲದಕೋಡಿ ಅಂಗನವಾಡಿ, ಕೊಳ್ನಾಡು ಗ್ರಾಮಪಂಚಾಯತ್‍ನ ಪೆರ್ಲದಬೈಲು ಅಂಗನವಾಡಿ, ಕೊಳ್ನಾಡು ಗ್ರಾಮಪಂಚಾಯತ್‍ನ ಸುರಿಬೈಲು ಅಂಗನವಾಡಿ, ಪುಣಚ ಗ್ರಾಮಪಂಚಾಯತ್‍ನ ಬರಿಂಜ ಅಂಗನವಾಡಿ.

Also Read  ಶ್ರೀರಾಮ ಸೇನೆ ಕಡಬ ತಾಲೂಕು ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ಮೋಹನ್ ಕೆರೆಕೋಡಿ ಹಾಗೂ ಸಂಚಾಲಕರಾಗಿ ಗಣೇಶ್ ಮೀನಾಡಿ

 

ಸಾಲೆತ್ತೂರು ಗ್ರಾಮಪಂಚಾಯತ್‍ನ ಸಾಲೆತ್ತೂರು ಶಾಲೆ, ವಿಟ್ಲ ಪಟ್ಟಣ ಪಂಚಾಯತ್ (ವಾರ್ಡ್ ಸಂಖ್ಯೆ-3) ಅಲಂಗಾರುಪಾದೆ ಅಂಗನವಾಡಿ, ವಿಟ್ಲಮುಡ್ನೂರು ಗ್ರಾಮಪಂಚಾಯತ್‍ನ ಕುಂಡಡ್ಕ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ರಿಹಾ ಪ್ಲಾನೆಟ್, ಚಂದ್ರನಾಥ ಬಸದಿ ಎದುರು, ಪುತ್ತೂರು ರಸ್ತೆ, ವಿಟ್ಲ ದೂರವಾಣಿ ಸಂಖ್ಯೆ:08255-23880 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿಟ್ಲ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top