ಕಡಬ – ಪ್ರಗತಿ ಪರಿಶೀಲನಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.18.ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳಾದ ಐವನ್ ಡಿಸೋಜಾರವರು ಜೂನ್ 19 ರಂದು ಬೆಳಿಗ್ಗೆ 11 ಗಂಟೆಗೆ ಕಡಬ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ಮತ್ತು ಕುಡಿಯುವ ನೀರು, ಬರ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಿರುವರು.

ಅಪರಾಹ್ನ 1 ಗಂಟೆಗೆ ಕಡಬ ಕಾಂಗ್ರೆಸ್ ಕಚೇರಿಗೆ ಭೇಟಿ, 2 ಗಂಟೆಗೆ ಕಡಬ ತಾಲೂಕಿನ ಎಲ್ಲಾ ಚುನಾಯಿತ ಪ್ರತಿನಿಧಿಗಳ ಭೇಟಿ ಮಾಡಲಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಕಡಬ:ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ಗ್ಯಾಸ್ ಪಂಪ್ ಸಿಬ್ಬಂದಿ ವಾಗ್ವಾದ.!

error: Content is protected !!
Scroll to Top