ಕಲ್ಲುಗುಡ್ಡೆ: ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರಗಳ ತೆರವು ➤ ಮೆಸ್ಕಾಂ ಸಿಬ್ಬಂದಿಗಳಿಗೆ ಸ್ಥಳೀಯರ ಸಾಥ್

(ನ್ಯೂಸ್ ಕಡಬ) newskadaba.com ಕಡಬ, ಜೂನ್.17. ಕಲ್ಲುಗುಡ್ಡೆ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಬಾಳೆಮಾರು, ಬೊಳ್ಳಾಜೆ, ಅಡಂಜೆಗೆ ಹಾದು ಹೋಗುವ 11 KV HT ಲೈನ್ ಮಾಗ೯ ಅರಣ್ಯ ಪ್ರದೇಶವಾಗಿರುವರಿಂದ ಯಾವಾಗಲೂ ಸಮಸ್ಯೆ ಕಂಡು ಬರುತ್ತಿದೆ.

ವಿದ್ಯುತ್ ಲೈನ್ ಗೆ ತಾಗಿಕೊಂಡಿರುವ  ಮರಗಳ ಕೊಂಬೆಗಳು,ಬಿದಿರುಗಳು ಬೀಳುವುದರಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ಈ ಬಾರಿ ಮಳೆಗಾಲ ಪ್ರಾರಂಭದಲ್ಲಿ ಇದರ ಪರಿಹಾರಕ್ಕಾಗಿ ಸ್ಥಳಿಯರು ಮತ್ತು ಮೆಸ್ಕಾಂ ಸಿಬ್ಬಂಧಿ ಶ್ರಮವಹಿಸಿದ್ದಾರೆ.

ಪವರ್ ಮ್ಯಾನ್ ಆದ ಗುರುಮೂತಿ೯ ಮತ್ತು ಕಿರಿಯ ಪವರ್ ಮ್ಯಾನ್ ರಮೇಶ ಹಾಗೂ ಅಲ್ಲಿನ ಸ್ಥಳೀಯವರಾದ ಹರೀಶ, ನವಿನ್, ಜಗದೀಶ, ರಘುರಾಜ, ಬಾಲಚಂದ್ರ, ಅನಿಲ್, ಚೇತನ್, ಜನಾ೯ದನ, ಮನುರಾಜ, ಪ್ರಮೋದ, ಸಂದೇಶ್, ಜಯಪ್ರಕಾಶ್, ಗಣೇಶ್, ಶರತ್, ನಿಥಿನ್, ಲಕ್ಷ್ಮೀಶ, ನಿಖಿಲ್, ಪೂವಪ್ಪ ಗೌಡ, ಭರತ್ ಎಲ್ಲರು ಸೇರಿ ಶಾಂತಡ್ಕದಿಂದ ಅಡಂಜೆ, ಎಂಜೀರಾವರೆಗೂ ಸುಮಾರೂ 5 ಕಿ.ಮೀಟರ್ 11KV HT ಮತ್ತು LT ವಿದ್ಯುತ್ ಲೈನ್ ಗೆ ತಾಗುವ ಮರಗಳನ್ನು ತೆರವುಗೊಳಿಸಿದರು.

Also Read  ಮರ್ಧಾಳ: ಸಾಮಾಜಿಕ ಮುಂದಾಳು ಮೋನಪ್ಪ ಗೌಡ ಪಂಜೋಡಿಯವರಿಗೆ ಶ್ರದ್ದಾಂಜಲಿ ಸಭೆ

 

error: Content is protected !!
Scroll to Top