(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂನ್.17.ಬೆಳ್ತಂಗಡಿ ತಾ| ಸಾಮಾಜಿಕ ಅರಣ್ಯ ಇಲಾಖೆಯು ಗ್ರಾ.ಪಂ., ಶಾಲೆ, ರಸ್ತೆ ಬದಿ ಸಹಿತ ಖಾಲಿ ಸ್ಥಳಗಳಲ್ಲಿ 66 ಸಾವಿರ ಸಸಿ ಗಿಡ ನೆಡುವ ಗುರಿ ಇರಿಸಿದೆ.
ವಿಶ್ವ ಪರಿಸರ ದಿನದಂದು ಉಜಿರೆ ಗ್ರಾ.ಪಂ.ನಲ್ಲಿ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಲಾಗಿದ್ದು, ಪ್ರತಿ ಗ್ರಾ.ಪಂ.ಗೆ 500 ಗಿಡಗಳಂತೆ ತಾ.ನ 48 ಗ್ರಾ.ಪಂ.ಗಳಿಗೆ ಗಿಡ ನೆಡುವ ಜವಾಬ್ದಾರಿ ನೀಡಿದೆ. ಸದ್ಯ 23 ಗ್ರಾ.ಪಂ.ಗಳಿಗೆ 11,500 ಗಿಡ ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಸಿ ನೆಡುವ ಜತೆಗೆ ಭಾರತ್ ಸ್ಕೌಟ್ಸ್ -ಗೈಡ್ಸ್ ವತಿ ಯಿಂದ 2,500 ಬೀಜದುಂಡೆ ಸಿದ್ಧಪಡಿಸಲಾಗುತ್ತಿದೆ. ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯ ನಡುತೋಪು ಹಾಗೂ ನಡ ಗ್ರಾ.ಪಂ. ವ್ಯಾಪ್ತಿಯ ಬನದಗುಡ್ಡೆ ಮತ್ತು ಬಳ್ಳಿತೋಟದಲ್ಲಿ ಬೀಜದುಂಡೆ ಸಿದ್ಧತೆ ಕಾರ್ಯ ನಡೆಸುತ್ತಿದೆ.ರಸ್ತೆ ಬದಿ ನೆಡುತೋಪು ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದು, ಮೂರು ವರ್ಷ ಗಳವರೆಗೂ ಅರಣ್ಯ ಇಲಾಖೆ ನಿರ್ವಹಣೆ ವಹಿಸಲಿದೆ.
ಈಗಾಗಲೇ 19 ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಮೊದಲ ಹಂತವಾಗಿ 3,665 ಗಿಡ ವಿತರಿಸಲಾಗಿದೆ. ಸಬ್‌ಮಿಷನ್ ಆನ್ ಆ್ಯಗ್ರೋಫಾರೆಸ್ಟ್ರಿ (ಎಸ್‌ಎಎಂಎಫ್) ಯೋಜನೆ ಮೂಲಕವೂ ಗಿಡಗಳ ನಾಟಿಗೆ ಅವಕಾಶ ವಿದೆ. ಹೆಬ್ಬೇವು, ಬೇಂಗ, ಹೆಬ್ಬಲಸು, ರಕ್ತಚಂದನ, ಹಲಸು, ಸೀತಾ ಅಶೋಕ, ರೆಂಜ, ಮಹಾಗನಿ, ನೇರಳೆ, ಬಾದಾಮಿ, ಪುನರ್ಪುಳಿ, ಶ್ರೀಗಂಧ, ಸಂಪಿಗೆ, ದೂಪ, ಕಹಿಬೇವು, ಕಕ್ಕೆ, ಸೀತಾಫಲ, ಪೇರಳೆ, ಬಿಲ್ವಪತ್ರೆ, ನೆಲ್ಲಿ, ಸಾಗುವಾನಿ, ಕಿರಾಲ್ ಬೋಗಿ ಸಹಿತ 24 ಜಾತಿಗಳ 66,050 ಸಸಿ ಬೆಳೆಸಿ ವಿತರಿಸಲಾಗಿದೆ. ಸ್ವಚ್ಛ ಭಾರತ ಮಿಷನ್‌ಯೋಜನೆಯಡಿ ಸ್ವಚ್ಛಮೇಮ ಜಯತೇ ಆಂದೋಲನ ಮೂಲಕ ಗ್ರಾ.ಪಂ.ಗಳುಈಗಾಗಲೇ ಪರಿಸರಸಂರಕ್ಷಣೆಯತ್ತ ಜವಾಬ್ದಾರಿಯುತ ಹೆಜ್ಜೆ ಇಟ್ಟಿದ್ದು, ತಾಲೂಕಿನಾದ್ಯಂತ ಹಸುರು ಕ್ರಾಂತಿ ಮೊಳಗಿದೆ.