ಕಂದಾಯ ಸಚಿವರ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.17.ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಇಂತಿವೆ:ಜೂನ್ 17 ರಂದು ರಾತ್ರಿ 9.25 ಗಂಟೆಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ವಾಸ್ತವ್ಯ, ಜೂ. 18ರಂದು ಬೆಳಿಗ್ಗೆ 8 ಗಂಟೆಗೆ ಉಡುಪಿಗೆ ತೆರಳಿ, ಉಡುಪಿ ಜಿಲ್ಲೆಯಲ್ಲಿ ಪ್ರವಾಹ/ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೈಗೊಂಡ ಪರಿಹಾರ ಕ್ರಮಗಳ ವೀಕ್ಷಣೆ ನಡೆಸಿ, ಬಳಿಕ ಸಭೆ ನಡೆಸಲಿದ್ದಾರೆ.

ಅಪರಾಹ್ನ 1.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ/ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೈಗೊಂಡ ಪರಿಹಾರ ಕ್ರಮಗಳ ವೀಕ್ಷಣೆ, 2.30 ಗಂಟೆಗೆ ಸಾರ್ವಜನಿಕರ ಭೇಟಿ ನಡೆಸಿ, 3 ಗಂಟೆಗೆ ಜಿಲ್ಲೆಯಲ್ಲ್ಲಿ ಪ್ರವಾಹ/ಬರ ಪರಿಹಾರ ಕ್ರಮಗಳು ಹಾಗೂ ಕಂದಾಯ ಇಲಾಖಾ ವಿಷಯಗಳ ಮತ್ತು ಯು.ಪಿ.ಒ.ಆರ್ ಯೋಜನೆ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಡಿಕೇರಿಗೆ ತೆರಳುವರು.

Also Read  ಪರಿಶಿಷ್ಟ ಜಾತಿಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

error: Content is protected !!
Scroll to Top