ವ್ಯಕ್ತಿ ನಾಪತ್ತೆ

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.17.ತೋಕೂರು ಗ್ರಾಮದ ಕಂಬಳಬೆಟ್ಟು ಮನೆಯ ಚಂದ್ರಹಾಸ ಎಂಬಾತನು ಮೇ 20 ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ಗಂಡಸಿನ ಚಹರೆ ಇಂತಿವೆ: ಚಂದ್ರಹಾಸ ಪ್ರಾಯ 40 ವರ್ಷ, 5.6 ಅಡಿ ಎತ್ತರ, ಗೋದಿ ಮೈಬಣ್ಣ. ಈ ಚಹರೆಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0824-2290533, 9480805359, 9480805332 ನಂಬ್ರಕ್ಕೆ ಅಧವಾ ಮಂಗಳೂರು ನಗರ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 0824-2220800. ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಮುಲ್ಕಿ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Also Read  ಸಚಿವ ಎಸ್. ಸುರೇಶ್ ಕುಮಾರ್ ಪ್ರವಾಸ

error: Content is protected !!
Scroll to Top