ಮಳವೂರು ಗ್ರಾಮಸಭೆ ಹಾಗೂ ವಾರ್ಡು ಸಭೆ

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.17.ಮಂಗಳೂರು ತಾಲೂಕು ಮಳವೂರು ಗ್ರಾಮದ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಜುಲೈ 5 ರಂದು ಪೂರ್ವಾಹ್ನ 10.30 ಗಂಟೆಗೆ ಕಾನ ಆಮಂತ್ರಣ ಹಾಲ್ ಕೆಂಜಾರು ಗ್ರಾಮದಲ್ಲಿ ನಡೆಯಲಿದೆ.

ಮಳವೂರು ಗ್ರಾಮದ 2019-20ನೇ ಸಾಲಿನಲ್ಲಿ ನಡೆಯುವ ಪ್ರಥಮ ಸುತ್ತಿನ ವಾರ್ಡು ಸಭೆಗಳು ಇಂತಿವೆ; ಜೂನ್ 19 ರಂದು ಅಪರಾಹ್ನ 2.30 ಗಂಟೆಗೆ ಗ್ರಾಮ ಪಂಚಾಯತ್ ಕಚೇರಿ ಸಭಾಭವನ ಮಳವೂರು ಕರಂಬಾರು, ಜೂನ್ 20 ರಂದು ಪೂರ್ವಾಹ್ನ 10.30 ಗಂಟೆಗೆ ಸಮುದಾಯ ಭವನ, ಅಂಬೇಡ್ಕರ್ ನಗರ ಪೇಜಾವರ ಕೆಂಜಾರು, ಜೂನ್ 21 ರಂದು ಪೂರ್ವಾಹ್ನ 10 ಗಂಟೆಗೆ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಭವನ, ಸಿದ್ದಾರ್ಥನಗರ ಮಳವೂರು, ಜೂನ್ 28 ರಂದು ಪೂರ್ವಾಹ್ನ 10 ಗಂಟೆಗೆ ಅಂಗನವಾಡಿ ಕೇಂದ್ರದ ವಠಾರ ಮರವೂರು, ಪೂರ್ವಾಹ್ನ 11 ಗಂಟೆಗೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನ ಕೆಂಜಾರು, ಅಪರಾಹ್ನ 2.30 ಗಂಟೆಗೆ ಕಾನ ಆಮಂತ್ರಣ ಹಾಲ್ ಕೆಂಜಾರು ಇಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಚಾರ್ಮಾಡಿ ಘಾಟ್ ರಸ್ತೆಯಲ್ಲಿ 2 ದಿನ ವಾಹನ ಸಂಚಾರ ನಿಷೇಧ

error: Content is protected !!
Scroll to Top