ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಅರ್ಜಿ ಆಹ್ವಾನ

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.17.ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2018ರಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವಯಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ಕಲಾವಿದರು/ಲೇಖಕರು/ಪ್ರಕಾಶಕರಿಗೆ ಕನ್ನಡ ಪುಸ್ತಕ ಸೊಗಸು 2018 (ಪ್ರಥಮ, ದ್ವಿತೀಯ, ತೃತೀಯ, ಮಕ್ಕಳ ಪುಸ್ತಕ, ಪುದ್ರಣ ಸೊಗಸು, ಮುಖಪುಟ ಚಿತ್ರ ವಿನ್ಯಾಸದ ಪ್ರಥಮ, ಮುಖಪುಟ ಚಿತ್ರ ಕಲೆಯ ದ್ವಿತೀಯ) ಬಹುಮಾನಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಸ್ವಯಂ ಅರ್ಜಿ ಸಲ್ಲಿಸಬಹುದು. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದನ ಹೆಸರು/ ಚಿತ್ರ ಕಲಾವಿದರ ಪೂರ್ಣ ವಿಳಾಸ ಈ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಜುಲೈ 15 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು.

Also Read  ಶಕ್ತಿ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ ► ಮಾನಸಿಕ ಹಾಗೂ ಶಾರೀರಿಕ ದೃಢತೆಗಾಗಿ ಆಟೋಟಗಳಲ್ಲಿ ನಿತ್ಯ ಪಾಲ್ಗೊಳ್ಳಿ - ದಿನೇಶ್ ಕುಂದರ್

ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ ರಸ್ತೆ ಬೆಂಗಳೂರು, ಕಚೇರಿ ವೆಬ್ ಸೈಟ್:www.kannadapustakapradhikara.com,   ದೂರವಾಣಿ ಸಂಖ್ಯೆ: 08022484516 /22107704 ಇಲ್ಲಿಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top