ಸಮುದ್ರ ತೀರದಲ್ಲಿ ಕರ್ತವ್ಯನರ್ವಹಿಸಲು ಸಜ್ಜಾಗಿರುವ ಗೃಹ ರಕ್ಷಕದಳ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15.ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡುವುದರೊಂದಿಗೆ ಜೀವರಕ್ಷಣೆಗಾಗಿ ಜಿಲ್ಲೆಯ 60 ಮಂದಿ ಗೃಹ ರಕ್ಷಕರು ಕಾರ್ಯೋನ್ಮುಖರಾಗಿದ್ದಾರೆ.

ಪಣಂಬೂರು, ತಣ್ಣೀರು ಬಾವಿ, ಉಳ‍್ಳಾಲ ಬೀಚ್ಗಳಲ್ಲಿ ಈಜಾಡಲು ಇಳಿದು ಜೀವಕ್ಕೇ ಕುತ್ತು ತಂದುಕೊಳ್ಳುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತದೆ. ಈಗಾಗಲೇ ಕಡಲಬ್ಬರವೂ ಜಾಸ್ತಿಯಾಗಿದ್ದು, ಆಗಮಿಸುವ ಪ್ರವಾಸಿಗರಿಗೆ ಸಮುದ್ರದಲ್ಲಿನ ಅಪಾಯದ ಮುನ್ಸೂಚನೆ ಇರುವುದಿಲ್ಲ. ಜಿಲ್ಲಾಡಳಿತದಿಂದ ಟೆಂಟ್‌, ಮೈಕ್‌ ವ್ಯವಸ್ಥೆ, ರೈನ್‌ ಕೋಟ್‌, ಚಯರ್‌ ಮತ್ತು ಬೋಟ್‌ಗಳನ್ನು ಗೃಹರಕ್ಷಕರಿಗೆ ನೀಡಲಾಗುತ್ತದೆ.

ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರ ಸಲಹೆ ಮೇರೆಗೆ ಗೃಹ ರಕ್ಷಕರು ಜೀವರಕ್ಷಕರಾಗಿ ಕೆಲಸ ಮಾಡುತ್ತಿಯಿಂದ ಜನರನ್ನು ರಕ್ಷಿಸಲು ಸಿದ್ಧರಾಗಿದ್ದಾರೆ ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಡಾ| ಮುರಳಿ ಮೋಹನ್‌ ಚೂಂತಾರು ತಿಳಿಸಿದ್ದಾರೆ.ನಗರದಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ತುರ್ತು ಪರಿಸ್ಥೀತಿಯನ್ನು ಎದುರಿಸಲು ಗೃಹ  ರಕ್ಷಕರನ್ನು ನಿಯೋಜಿಸಲಾಗಿದೆ. ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಗೃಹ ರಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಜೋಡುಪಾಲ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಸ್ನಾನಘಟ್ಟ, ಕಡಬ, ಬಂಟ್ವಾಳ, ಬೆಳ್ತಂಗಡಿಸಲಾಗಿದೆ. ಖಾಕಿ ಧರಿಸಿ ಲಾಠಿ ಹಿಡಿದು ಇಲ್ಲಿ ಗೃಹರಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ.

Also Read  ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ನಾಳೆ ಹೊಸ ಮಾರ್ಗಸೂಚಿ ಪ್ರಕಟ ➤ ಸಿಎಂ ಬೊಮ್ಮಾಯಿ                                                                               

error: Content is protected !!
Scroll to Top