ಸಾರ್ವಜನಿಕ ಆಕ್ಷೇಪಣೆ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15.ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ನಡ್ಸಾಲು ಗ್ರಾಮದಲ್ಲಿ ಹೊಸದಾಗಿ ನಿರ್ಮಿತವಾಗಿರುವ ಸಾಚಿ ರಾಯಲ್ ಅಪಾರ್ಟ್‍ಮೆಂಟ್‍ಗೆ ಕೇಂದ್ರ ಸ್ಥಿರಾಸ್ತಿ ಮಾರುಕಟ್ಟೆ ದರ ನಿರ್ಧರಣಾ ಸಮಿತಿಯು ರೂ 22000/ ದರ ನಿಗದಿ ಪಡಿಸಲು ತಾತ್ವಿಕ ಅನುಮೋದನೆ ನೀಡಿದ್ದು ಇದಕ್ಕೆ ನಿಯಮಾವಳಿ ಅನ್ವಯ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.


ಪರಿಶೀಲನೆಗಾಗಿ ತಾಲೂಕು ಕಚೇರಿ ಮಂಗಳೂರು, ಮಹಾನಗರ ಪಾಲಿಕೆ ಸುರತ್ಕಲ್, ವಿಶೇಷ ತಹಶೀಲ್ದಾರರ ಕಚೇರಿ ಕಾಪು ಇಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಜೂನ್ 13 ರಂದು ಪ್ರಕಟಿಸಲಾಗಿದೆ.
ಸಾರ್ವಜನಿಕರಿಂದ ಆಕ್ಷೇಪಣೆ ಏನಾದರೂ ಇದ್ದಲ್ಲಿ ಪ್ರಕಟಣೆಯಾದ ದಿನದಿಂದ 15 ದಿನಗಳೊಳಗೆ ಲಿಖಿತ ರೂಪದಲ್ಲಿ ತಹಶೀಲ್ದಾರರು ಮಂಗಳೂರು ಅಥವಾ ಉಪನೋಂದಣಾಧಿಕಾರಿ ಮುಲ್ಕಿ ಇವರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಫೆ.11ರಂದು ಕರಾವಳಿಗೆ ಭೇಟಿ ನೀಡಲಿರುವ ಅಮಿತ್ ಶಾ !

error: Content is protected !!
Scroll to Top